ಏ.8ಕ್ಕೆ ಪ್ರೊ ಕಬಡ್ಡಿ ಆಟಗಾರರ ಹರಾಜು

ಮಂಗಳವಾರ, ಮಾರ್ಚ್ 19, 2019
33 °C

ಏ.8ಕ್ಕೆ ಪ್ರೊ ಕಬಡ್ಡಿ ಆಟಗಾರರ ಹರಾಜು

Published:
Updated:

ಮುಂಬೈ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಏಳನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಏಪ್ರಿಲ್‌ 8 ಮತ್ತು 9ರಂದು ಇಲ್ಲಿ ನಡೆಯಲಿದೆ.

ಲೀಗ್‌ನ ಉದ್ಘಾಟನಾ ಪಂದ್ಯ ಜುಲೈ 19ರಂದು ನಿಗದಿಯಾಗಿದೆ. ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ತವರಿನ ಪಂದ್ಯಗಳು ಜೈಪುರದಲ್ಲೇ ಜರುಗಲಿವೆ. ಈ ತಂಡ ಆರನೇ ಆವೃತ್ತಿಯ ಪಂದ್ಯಗಳನ್ನು ಪಂಚಕುಲದಲ್ಲಿ ಆಡಿತ್ತು.

‘ಏಳನೇ ಆವೃತ್ತಿಯಲ್ಲಿ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಮುಂಬೈಯಲ್ಲಿ ಹರಾಜು ನಡೆಯಲಿದೆ. 2020ರ ಜುಲೈಯಲ್ಲಿ ಎಂಟನೇ ಆವೃತ್ತಿಯ ಪಂದ್ಯಗಳನ್ನು ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಲೀಗ್‌ ಕಮಿಷನರ್‌ ಅನುಪಮ್‌ ಗೋಸ್ವಾಮಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !