ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಚಾಂಪಿಯನ್‌ಷಿಪ್‌: ಕುಸ್ತಿ ತಂಡದಲ್ಲಿ ಪೂಜಾ ಧಂಡ

ನವಜೋತ್ ಕೌರ್‌ಗೆ ಸ್ಥಾನ
Last Updated 19 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಳಿಸಲು ವಿಫಲರಾಗಿರುವ ಪೂಜಾ ಧಂಡ ಮತ್ತು ನವಜೋತ್ ಕೌರ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಲಖನೌದಲ್ಲಿ ಸೋಮವಾರ ನಡೆದ ಅಯ್ಕೆ ಪ್ರಕ್ರಿಯೆಯಲ್ಲಿ ಇವರಿಬ್ಬರಿಗೆ ಎದುರಾಳಿಗಳೇ ಇರಲಿಲ್ಲ. ಹೀಗಾಗಿ ಮ್ಯಾಟ್‌ ಪ್ರವೇಶಿಸದೇ ಇವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವವರ ಪಟ್ಟಿಯಲ್ಲಿ ಸ್ಥಾನ ಗಳಿಸಿದರು.

ಒಲಿಂಪಿಕ್ಸ್‌ಗೆ ಆಯ್ಕೆಯಾಗದ ಆಟಗಾರರನ್ನು ಹೊರತುಪಡಿಸಿದ ನಾಲ್ಕು ವಿಭಾಗಗಳಲ್ಲಿ ಸೋಮವಾರ ಆಯ್ಕೆ ನಡೆಯಿತು. ಪೂಜಾ 59 ಕೆಜಿ ವಿಭಾಗದಲ್ಲೂ ನವಜೋತ್‌ 65 ಕೆಜಿ ವಿಭಾಗದಲ್ಲೂ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದರು.

ಅಶಿಸ್ತು ತೋರಿದ 25 ಕುಸ್ತಿಪಟುಗಳ ಮೇಲೆ ಭಾರತ ಕುಸ್ತಿ ಫೆಡರೇಷನ್ ನಿಷೇಧ ಹೇರಿದೆ. ಪೂಜಾ ಮತ್ತು ನವಜೋತ್ ವಿರುದ್ಧ ಸ್ಪರ್ಧಿಸಬೇಕಾಗಿದ್ದವರು ಈ ಪಟ್ಟಿಯಲ್ಲಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರದ ಲಖನೌ ಕೇಂದ್ರದಲ್ಲಿ ನಡೆದಿದ್ದ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿದ್ದ 45 ಮಂದಿ ಪೈಕಿ 25 ಮಂದಿ ಅನುಮತಿ ಪಡೆಯದೇ ಹೊರಗೆ ಹೋಗಿದ್ದರು. ಹೀಗಾಗಿ ನಿಷೇಧಕ್ಕೆ ಒಳಗಾಗಿದ್ದರು.

ಒಲಿಂಪಿಕ್‌ ಅರ್ಹತಾ ಸುತ್ತಿನಲ್ಲಿ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂಜಾ ಧಂಡ ಎದುರಾಳಿ ಸರಿತಾ ಮೋರ್‌ ವಿರುದ್ಧ ಸೋತಿದ್ದರು. ಕಳೆದ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ನವಜೋತ್‌ ಅವರು ಒಲಿಂಪಿಕ್‌ ಅರ್ಹತಾ ಸ್ಪರ್ಧೆಯಲ್ಲಿ (68 ಕೆಜಿ) ದಿವ್ಯಾ ಕಕ್ರಾನ್ ಎದುರು ಸೋತಿದ್ದರು.

ಮೊದಲು ಬೈ; ನಂತರ ಗೆಲುವು:ಸೋಮವಾರ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಲಲಿತಾ ಮೊದಲ ಸುತ್ತಿನಲ್ಲಿ ಬೈ ಪಡೆದರು. ನಂತರ ಮೀನಾಕ್ಷಿ ಎದುರು 9–1ರಲ್ಲಿ ಗೆದ್ದರು. ಮೊದಲ ಸುತ್ತಿನಲ್ಲಿ ಮೀನಾಕ್ಷಿ 5–0ಯಿಂದ ಕಿರಣ್ ಅವರನ್ನು ಮಣಿಸಿದ್ದರು. 72 ಕೆಜಿ ವಿಭಾಗದಲ್ಲಿ ನಿಕ್ಕಿ ವಿರುದ್ಧ 3–2ರಲ್ಲಿ ಕೋಮಲ್ ಗೆಲುವು ಸಾಧಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ ಸೆಪ್ಟೆಂಬರ್‌ 14–22ರ ವರೆಗೆ ಕಜಕಸ್ತಾನದ ನೂರ್ ಸುಲ್ತಾನ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT