ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಅಥ್ಲೆಟಿಕ್ಸ್‌: ತಮಿಳುನಾಡು ಸಮಗ್ರ ಚಾಂಪಿಯನ್‌

ಕರ್ನಾಟಕ ತಂಡ ‘ರನ್ನರ್‌ ಅಪ್’
Last Updated 16 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಮೈಸೂರು: ತಮಿಳುನಾಡು ತಂಡ ಶನಿವಾರ ಇಲ್ಲಿ ಕೊನೆಗೊಂಡ 34ನೇ ಅಖಿಲ ಭಾರತ ಅಂಚೆ ಅಥ್ಲೆ ಟಿಕ್‌ ಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದು ಕೊಂಡಿತು. ಆತಿಥೇಯ ಕರ್ನಾಟಕ ‘ರನ್ನರ್‌ ಅಪ್‌’ ಆಯಿತು.

ಚಾಮುಂಡಿವಿಹಾರ ಕ್ರೀಡಾಂಗಣ ದಲ್ಲಿ ನಡೆದ ಕೂಟದಲ್ಲಿ ತಮಿಳುನಾಡು ಒಟ್ಟು 136 ಪಾಯಿಂಟ್ಸ್‌ ಸಂಗ್ರಹಿಸಿದರೆ, ಕರ್ನಾಟಕ 111 ಪಾಯಿಂಟ್ಸ್‌ ಗಳಿಸಿತು.

ಮಹಿಳೆಯರ ವಿಭಾಗದಲ್ಲಿ ಕರ್ನಾಟಕ (63 ಪಾಯಿಂಟ್ಸ್) ಪ್ರಶಸ್ತಿ ಜಯಿಸಿತು. ಕರ್ನಾಟಕದ ವಿ.ಸಂಜಯ್‌ ಪುರುಷರ ವಿಭಾಗದ ‘ಶ್ರೇಷ್ಠ ಅಥ್ಲೀಟ್‌’ ಗೌರವ ಪಡೆದರು.

ಅಂತಿಮ ದಿನದ ಫಲಿತಾಂಶ:ಪುರುಷರ ವಿಭಾಗ: 200 ಮೀ. ಓಟ: ವಿ.ಸಂಜಯ್ (ಕರ್ನಾಟಕ)–1, ಮೆರ್ವಿನ್‌ (ತಮಿಳು ನಾಡು)–2, ಮನ್‌ಪ್ರೀತ್‌ ಸಿಂಗ್‌ (ಪಂಜಾಬ್)–3. ಕಾಲ: 22.7 ಸೆ.

800 ಮೀ. ಓಟ: ಯು.ಎನ್‌.ಪರ್ಮಾರ್ (ಗುಜರಾತ್). ಕಾಲ: 2 ನಿ. 17.9 ಸೆ. 5,000 ಮೀ. ಓಟ: ಎನ್‌.ಶಿವ (ಆಂಧ್ರಪ್ರದೇಶ)–1, ಓಂಪ್ರಕಾಶ್‌ (ಕರ್ನಾಟಕ)–2, ಲಲಿತ್‌ ವರ್ಮಾ (ಹರಿಯಾಣ)–3. ಕಾಲ: 17 ನಿ. 53.7ಸೆ. 400 ಮೀ. ಹರ್ಡಲ್ಸ್: ಎಸ್‌.ಮೆರ್ವಿನ್‌ (ತಮಿಳುನಾಡು)–1, ಗೋಪಿನಾಥ್‌ ಮೊಹಾಂತಿ (ಒಡಿಶಾ)–2, ಕೆ.ಶಿವನಾಗರಾಜು (ಆಂಧ್ರ ಪ್ರದೇಶ)–3. ಕಾಲ: 58.8 ಸೆ. ಮಹಿಳೆಯರ ವಿಭಾಗ: 200 ಮೀ. ಓಟ: ಶಿಪು ಮೊಂಡಲ್ (ಪಶ್ಚಿಮ ಬಂಗಾಳ)–1, ಸ್ನೇಹಾ ಜೈನ್‌ (ರಾಜಸ್ತಾನ)–2, ಪಿ.ಎಲ್‌.ಚಾವುರೆ (ಮಹಾರಾಷ್ಟ್ರ)–3. ಕಾಲ: 29.1 ಸೆ.

800 ಮಿ. ಓಟ: ರೀತು ದಿನಕರ್‌ (ಉತ್ತರ ಪ್ರದೇಶ)–1, ಶ್ರದ್ಧಾ ಆರ್‌.ದೇಸಾಯಿ (ಕರ್ನಾಟಕ)–2, ಎಚ್‌.ಎಂ.ಬರಿಯಾ (ಗುಜರಾತ್)–2. ಕಾಲ: 2 ನಿ. 41.9 ಸೆ.

400 ಮೀ. ಹರ್ಡಲ್ಸ್: ಶ್ರದ್ದಾ ಆರ್‌.ದೇಸಾಯಿ (ಕರ್ನಾಟಕ)–1, ಜಿ.ಕೆ.ನಮಿತಾ (ಕರ್ನಾಟಕ)–2, ಕಾಲ: 1 ನಿ. 22.9 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT