ಬುಧವಾರ, ನವೆಂಬರ್ 30, 2022
21 °C
ಅಖಿಲ ಭಾರತ ಪೋಸ್ಟಲ್ ವಾಲಿಬಾಲ್ ಟೂರ್ನಿ: ಹಿಮಾಚಲ ಪ್ರದೇಶ ರನ್ನರ್ಸ್ ಅಪ್‌

ಕರ್ನಾಟಕ ತಂಡಕ್ಕೆ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅತ್ಯುತ್ತಮ ಆಟವಾಡಿದ ಆತಿಥೇಯ ಕರ್ನಾಟಕ ವೃತ್ತ ತಂಡವು ಅಖಿಲ ಭಾರತ ಪೋಸ್ಟಲ್ (ಅಂಚೆ ಇಲಾಲೆ) ವಾಲಿವಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಕೊನೆಗೊಂಡ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ತಂಡದವರು 25-20, 25-21, 25-15ರಿಂದ ಕಳೆದ ಬಾರಿಯ ಚಾಂಪಿಯನ್‌ ಹಿಮಾಚಲ ಪ್ರದೇಶ ತಂಡಕ್ಕೆ ಸೋಲುಣಿಸಿದರು. ಆ ಮೂಲಕ 2019ರ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡರು.

‘ಬೆಸ್ಟ್‌ ಆಫ್‌ ಫೈವ್‌‘ ಸೆಟ್‌ಗಳ ಮಾದರಿಯ ಪಂದ್ಯಗಳ ಪ್ರಶಸ್ತಿ ಸುತ್ತಿನಲ್ಲಿ ಆತಿಥೇಯ ಆಟಗಾರರು ಎದುರಾಳಿ ತಂಡದ ವಿರುದ್ಧ ಚಾಕಚಕ್ಯತೆಯ ಆಟದ ಮೂಲಕ ಗಮನಸೆಳೆದರು‌. 70 ನಿಮಿಷಗಳಲ್ಲಿ ಮೂರು ಸೆಟ್‌ ಗೆದ್ದು ಟ್ರೋಫಿಗೆ ಮುತ್ತಿಕ್ಕಿದರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ ಸೆಣಸಾಟಗಳಲ್ಲಿ ಕರ್ನಾಟಕ 25-16, 25-17, 25-18ರಿಂದ ಪಶ್ಚಿಮ ಬಂಗಾಳ ತಂಡವನ್ನು ಪರಾಭವಗೊಳಿಸಿದರೆ, ಹಿಮಾಚಲ ಪ್ರದೇಶ 25-21, 18-25,25-23,25-18ರಿಂದ ಕೇರಳ ತಂಡಕ್ಕೆ ಸೋಲುಣಿಸಿತ್ತು.

ಪಶ್ಚಿಮ ಬಂಗಾಳ ತಂಡವು ಕೇರಳವನ್ನು ಮಣಿಸಿ ಮೂರನೇ ಸ್ಥಾನ ಗಳಿಸಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು