ಭಾನುವಾರ, ನವೆಂಬರ್ 29, 2020
20 °C
ಚೀನಾಗೆ ಆಘಾತ

ಪ್ರಗ್ನಾನಂದ- ದಿವ್ಯಾ ಮಿಂಚು: ಚೆಸ್‌ ಒಲಿಂಪಿಯಾಡ್‌ ಕ್ವಾರ್ಟರ್‌ಫೈನಲ್‌ಗೆ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಆರ್‌. ಪ್ರಗ್ನಾನಂದ ಹಾಗೂ ದಿವ್ಯಾ ದೇಶ‌ಮುಖ್‌ ಅವರು ಉತ್ತಮ ಸಾಮರ್ಥ್ಯ ತೋರಿದರು. ಇದರೊಂದಿಗೆ ಭಾರತ ತಂಡ ಪ್ರಿಲಿಮನರಿ ಕೊನೆಯ ಹಾಗೂ ಒಂಬತ್ತನೇ ಸುತ್ತಿನಲ್ಲಿ 4–2ರಿಂದ ಚೀನಾ ತಂಡವನ್ನು ಮಣಿಸಿ ಫಿಡೆ ಆನ್‌ಲೈನ್‌ ಚೆಸ್‌ ಒಲಿಂಪಿಯಾಡ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ.

ಟಾಪ್‌ ಡಿವಿಷನ್‌ನ ಗುಂಪು ಎ ವಿಭಾಗದಲ್ಲಿ ಭಾರತ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿತು. ಆಗಸ್ಟ್‌ 28ರಂದು ಎಂಟರಘಟ್ಟದ ಹಣಾಹಣಿ ನಡೆಯಲಿದ್ದು, ಭಾರತದ ಎದುರಾಳಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ.

ಭಾರತ ನಾಲ್ಕರಲ್ಲಿ ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತು.

15 ವರ್ಷದ ಪ್ರಗ್ನಾನಂದ ಅವರು ಲಿಯು ಯಾನ್‌ ಎದುರು ಜಯ ಸಾಧಿಸಿದರು. 10 ಹಾಗೂ 12 ವರ್ಷದೊಳಗಿನವರ ವಿಭಾಗದ ಮಾಜಿ ವಿಶ್ವ ಚಾಂಪಿಯನ್‌  ದಿವ್ಯಾ ಅವರು ಜಿನರ್‌ ಜು ಅವರನ್ನು ಪರಾಭವಗೊಳಿಸಿದರು.

ಭಾರತ ತಂಡದ ನಾಯಕತ್ವ ವಹಿಸಿರುವ ವಿದಿತ್‌ ಗುಜರಾತಿ ಅವರು ವಿಶ್ವದ ಮೂರನೇ ಕ್ರಮಾಂಕದ ದಿಂಗ್‌ ಲಿರೆನ್‌ ಎದುರು ಹಾಗೂ ಪಿ.ಹರಿಕೃಷ್ಣ ಅವರು ಯಾಂಗ್‌ಯಿ ಎದುರು ಡ್ರಾ ಸಾಧಿಸಿದರು.

ಕೊನೇರು ಹಂಪಿ ಅವರು ವಿಶ್ವದ ಅಗ್ರ ಕ್ರಮಾಂಕದ ಮಹಿಳಾ ಪಟು ಯಿಫಾನ್‌ ಹೊ ವಿರುದ್ಧ ಹಾಗೂ ದ್ರೋಣವಳ್ಳಿ ಹರಿಕಾ ಅವರು ಸದ್ಯದ ವಿಶ್ವ ಚಾಂಪಿಯನ್‌ ವೆಂಜನ್‌ ಜು ಅವರ ಎದುರು ಡ್ರಾ ಮಾಡಿಕೊಂಡರು.

ಭಾರತ ಸದ್ಯ ಎ ಗುಂಪಿನಲ್ಲಿ 17 ಪಾಯಿಂಟ್ಸ್‌ ಗಳಿಸಿದ್ದು, 39.5 ಬೋರ್ಡ್‌ ಪಾಯಿಂಟ್ಸ್‌ ಕಲೆಹಾಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು