ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ: ‘ಪ್ರವಾಹ’ದೆದುರು ಈಸಿ ಗೆದ್ದ ನಿರಂಜನ್

Last Updated 1 ಜನವರಿ 2022, 6:28 IST
ಅಕ್ಷರ ಗಾತ್ರ

ಉದ್ಯಾನನಗರಿಯ ಕನಸುಕಂಗಳ ಯುವಕ ನಿರಂಜನ್ ಮುಕುಂದನ್ ಅವರ ಜೀವನ ಅಕ್ಷರಶಃ ಪ್ರವಾಹದ ವಿರುದ್ಧದ ಈಜು.ಅಂಗವೈಕಲ್ಯದ ಸವಾಲು, ಹತ್ತೊಂಬತ್ತು ಶಸ್ತ್ರಚಿಕಿತ್ಸೆಗಳ ನೋವು ಮೀರಿ ನಿಂತು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಈಜುಪಟು ಇವರು. ಅವರಿಗೆ ಈಗ 26 ವರ್ಷ.

ಹುಟ್ಟಿನಿಂದಲೇ ಕಾಡಿದ ಬೆನ್ನುಹುರಿಯ ದೌರ್ಬಲ್ಯ (ಸ್ಪೈನಾ ಬೈಫಿರಾ) ದಿಂದಾಗಿನಿರಂಜನ್‌ಗೆ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಏಳನೇ ವಯಸ್ಸಿನಲ್ಲಿ ವೈದ್ಯರೊಬ್ಬರು ಅಕ್ವಾ ಥೆರಪಿ (ಈಜು) ಅಥವಾ ಕುದುರೆ ಸವಾರಿ ಕಲಿಸಿ ಎಂದು ಪಾಲಕರಿಗೆ ನೀಡಿದ ಸಲಹೆಯೇ ನಿರಂಜನ್ ಇಂದು ಈ ಎತ್ತರಕ್ಕೆ ಬೆಳೆಯಲು ಕಾರಣವಾಯಿತು.

ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದ ಅಪ್ಪ ಆರ್.ಮುಕುಂದನ್ಮತ್ತು ತಾಯಿ ಎಂ.ಲಕ್ಷ್ಮೀ ಅವರು ಮಗನಿಗೆ ಅಕ್ವಾ ಥೆರಪಿ ಕೊಡಿಸಿದರು. ತಮ್ಮ ಕನಸು ನನಸು ಮಾಡಿಕೊಳ್ಳಲು ಅವರು ಕಠಿಣ ಪರಿಶ್ರಮ, ಅಭ್ಯಾಸದ ಜೊತೆಗೆ 19 ಶಸ್ತ್ರಚಿಕಿತ್ಸೆಗಳನ್ನೂ ಮಾಡಿಸಿಕೊಳ್ಳಬೇಕಾಯಿತು.ಆ ನೋವುಗಳನ್ನು ನುಂಗುತ್ತ 19 ವರ್ಷಗಳಲ್ಲಿ ಅಂತರರಾಷ್ಟ್ರೀಯ ಪ್ಯಾರಾ ಈಜುಕೂಟಗಳಲ್ಲಿ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದ ದಾಖಲೆ ಇವರದ್ದು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 50 ಮೀಟರ್ಸ್ ಬಟರ್‌ಫ್ಲೈನಲ್ಲಿ ಸ್ಪರ್ಧಿಸಿದರು. 2021ರಲ್ಲಿ ಜರ್ಮನಿಯಲ್ಲಿ ನಡೆದ ಅಂತರರಾಷ್ಟ್ರೀಯ ಪ್ಯಾರಾ ಈಜಿನ 400 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ದಾಖಲೆ ಬರೆದರು. 12 ವರ್ಷ ಹಳೆಯದಾದ ಏಷ್ಯಾ ಮಟ್ಟದ ದಾಖಲೆಯನ್ನು ಅವರು ಮೀರಿ ನಿಂತರು. ಕ್ರೊವೇಷ್ಯಾ ಅಂತರರಾಷ್ಟ್ರೀಯ ಈಜಿನಲ್ಲಿ ಆರು ಚಿನ್ನ ಗೆದ್ದು 2022ರಲ್ಲಿ ನಡೆಯಲಿರುವ ವಿಶ್ವ ಪ್ಯಾರಾ ಈಜು ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT