ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮೋದ್, ಮನೋಜ್ ವರ್ಷದ ಪ್ಯಾರಾ ಬ್ಯಾಡ್ಮಿಂಟನ್ ಪಟುಗಳು

Last Updated 11 ನವೆಂಬರ್ 2021, 14:09 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪ್ರಮೋದ್ ಭಗತ್ ಅವರು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಫೆಡರೇಷನ್‌ನ (ಬಿಡಬ್ಲ್ಯುಎಫ್‌) ವರ್ಷದ ಬ್ಯಾಡ್ಮಿಂಟನ್ ಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪುರುಷರ ವಿಭಾಗದಲ್ಲಿ ಆರು ಮಂದಿಯನ್ನು ಅಯ್ಕೆ ಮಾಡಲಾಗಿದ್ದು ವರ್ಷದ ಜೋಡಿ ಆಟಗಾರರ ವಿಭಾಗದಲ್ಲಿ ಮನೋಜ್‌ ಸರ್ಕಾರ್ ಅವರನ್ನು ಕೂಡ ಆರಿಸಲಾಗಿದೆ. ಈ ವಿಭಾಗವನ್ನು ಇದೇ ಮೊದಲ ಬಾರಿ ಸೇರಿಸಲಾಗಿದೆ ಎಂದು ಬಿಡಬ್ಲ್ಯುಎಫ್‌ ಗುರುವಾರ ತಿಳಿಸಿದೆ.

ಹಾಲಿ ವಿಶ್ವ ಚಾಂಪಿಯನ್ ಆಗಿರುವ ಪ್ರಮೋದ್ ಭಗತ್‌ ಟೋಕಿಯೊದಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಎಸ್‌ಎಲ್‌3 ವಿಭಾಗದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ಮನೋಜ್ ಸರ್ಕಾರ್ ಇದೇ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕಲೊಂಡಿದ್ದರು.

ನಾಲ್ಕನೇ ವಯಸ್ಸಿನಲ್ಲಿ ಪೋಲಿಯೊ ಪೀಡಿತರಾದ ಪ್ರಮೋದ್ ಅವರಿಗೆ ಈಗ 33 ವರ್ಷ. ನೆರೆಮನೆಯ ಮಕ್ಕಳು ಆಡುತ್ತಿದ್ದುದನ್ನು ಕಂಡು ಬಾಲ್ಯದಲ್ಲೇ ಬ್ಯಾಡ್ಮಿಂಟನ್ ಕ್ರೀಡೆಯತ್ತ ಒಲವು ತೋರಿದ ಪ್ರಮೋದ್ ಆರಂಭದಲ್ಲಿ ಎಲ್ಲರ ವಿರುದ್ಧವೂ ಸ್ಪರ್ಧಿಸುತ್ತಿದ್ದರು. 2006ರಲ್ಲಿ ಸ್ಪರ್ಧಾತ್ಮಕ ಪ್ಯಾರಾ ಬ್ಯಾಡ್ಮಿಂಟನ್ ಕಡೆಗೆ ಕಣಕ್ಕೆ ಇಳಿಯಲು ನಿರ್ಧರಿಸಿದ್ದರು.

ಎಸ್‌ಎಲ್‌3 ವಿಭಾಗದಲ್ಲಿ ಏಷ್ಯನ್ ಚಾಂಪಿಯನ್ ಕೂಡ ಆಗಿರುವ ಅವರು ವಿಶ್ವದ ಒಂದನೇ ಕ್ರಮಾಂಕದ ಆಟಗಾರನೂ ಆಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಪರುಷ ಮತ್ತು ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆದ ವಿಕ್ಟರ್ ಅಕ್ಸೆಲ್ಸನ್ ಮತ್ತು ಚೆನ್‌ ಯೂ ಫೀ ಅವರು ಕೂಡ ಪ್ರಶಸ್ತಿಗೆ ಪಾತ್ರರಾದವರ ಪಟ್ಟಿಯಲ್ಲಿದ್ದಾರೆ.

ಬಿಡಬ್ಲ್ಯುಎಫ್‌ವರ್ಷದ ಆಟಗಾರರು
ಪುರುಷರ ವಿಭಾಗ

ಆಟಗಾರ ದೇಶ
ವಿಕ್ಟರ್ ಅಕ್ಸೆಲ್ಸನ್ ಡೆನ್ಮಾರ್ಕ್‌
ಆ್ಯಂಡೆರ್ಸ್ ಆಂಟೊನ್ಸೆನ್‌ ಡೆನ್ಮಾರ್ಕ್‌
ನಗ್‌ ಯೀ ಲಿಯು ಚೀನಾ
ಯೂಟಾ ವಟನಬೆ ಜಪಾನ್

ಮಹಿಳೆಯರ ವಿಭಾಗ

ಆಟಗಾರ್ತಿ ದೇಶ
ಚೆನ್‌ ಯೂ ಫೀ ಚೀನಾ
ಕರೊಲಿನಾ ಮರಿನ್ ಸ್ಪೇನ್‌
ತಾಯ್‌ ಜು ಯಿಂಗ್ ತೈಪೆ
ಅಕಾನೆ ಯಾಮಗುಚಿ ಜಪಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT