ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಪ್ರಣವಿಗೆ ಜಂಟಿ 16ನೇ ಸ್ಥಾನ

Last Updated 12 ಮಾರ್ಚ್ 2023, 11:33 IST
ಅಕ್ಷರ ಗಾತ್ರ

ಕೇಪ್‌ಟೌನ್‌ (ಪಿಟಿಐ): ಭಾರತದ ಪ್ರಣವಿ ಅರಸ್‌ ಅವರು ಇಲ್ಲಿ ಕೊನೆಗೊಂಡ ಇನ್‌ವೆಸ್ಟೆಕ್‌ ಮಹಿಳಾ ಓಪನ್‌ ಗಾಲ್ಫ್‌ ಟೂರ್ನಿಯಲ್ಲಿ ಜಂಟಿ 16ನೇ ಸ್ಥಾನ ಪಡೆದುಕೊಂಡರು.

ಸ್ಟೀನ್‌ಬರ್ಗ್‌ ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ಟೂರ್ನಿಯ ಕೊನೆಯ ಸುತ್ತಿನ ಸ್ಪರ್ಧೆಯನ್ನು ಅವರು 69 ಸ್ಟ್ರೋಕ್‌ಗಳಲ್ಲಿ ಕೊನೆಗೊಳಿಸಿದರು. ವಾಣಿ ಕಪೂರ್‌ ಅವರು ಜಂಟಿ 12ನೇ ಸ್ಥಾನ ಪಡೆದರು. ಮೂರನೇ ಸುತ್ತಿನ ಕೊನೆಯಲ್ಲಿ ಜಂಟಿ ಎಂಟನೇ ಸ್ಥಾನದಲ್ಲಿದ್ದ ಅವರು ಅಂತಿಮ ಸುತ್ತಿನ ಸ್ಪರ್ಧೆ ಪೂರೈಸಲು 71 ಸ್ಟ್ರೋಕ್‌ಗಳನ್ನು ತೆಗೆದುಕೊಂಡರು.

ದಕ್ಷಿಣ ಆಫ್ರಿಕಾದ ಆ್ಯಶ್ಲೆ ಬುಹಾಯ್‌ ಈ ಟೂರ್ನಿಯನ್ನು ಗೆದ್ದುಕೊಂಡರು. ಎರಡನೇ ಸುತ್ತಿನ ಬಳಿಕ ಇತರ ಸ್ಪರ್ಧಿಗಳಿಗಿಂತ ನಾಲ್ಕು ಶಾಟ್‌ಗಳ ಮುನ್ನಡೆಯಲ್ಲಿದ್ದ ಬುಹಾಯ್‌, ಕೊನೆಯವರೆಗೂ ಅದನ್ನು ಕಾಪಾಡಿಕೊಂಡರು.

ಸ್ಪೇನ್‌ನ ಅನಾ ಪೆಲಜ್ ಟ್ರಿವಿನೊ ಎರಡನೇ ಸ್ಥಾನ ಪಡೆದರೆ, ಜರ್ಮನಿಯ ಕಿಯಾರಾ ನೋಹಾ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಜಂಟಿ 53ನೇ ಸ್ಥಾನದಲ್ಲಿ ಮನು (ನೈರೋಬಿ ವರದಿ): ಭಾರತದ ಮನು ಗಂದಾಸ್ ಅವರು ನೈರೋಬಿಯಲ್ಲಿ ನಡೆಯುತ್ತಿರುವ ಮ್ಯಾಜಿಕಲ್‌ ಕೆನ್ಯಾ ಓಪನ್‌ ಗಾಲ್ಫ್‌ ಟೂರ್ನಿಯ ಮೂರನೇ ಸುತ್ತಿನ ಬಳಿಕ ಜಂಟಿ 53ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT