ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಪ್ರಿಯಾಂಶು ಸಿಂಗಲ್ಸ್‌ ಚಾಂಪಿಯನ್‌

ಬಹರೇನ್‌ ಸಿರೀಸ್‌ ಬ್ಯಾಡ್ಮಿಂಟನ್‌
Last Updated 14 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಇಸಾ ಟೌನ್‌, ಬಹರೇನ್‌: ಅಗ್ರ ಶ್ರೇಯಾಂಕದ ಕೆನಡದ ಆಟಗಾರ ಜೇಸನ್‌ ಆಂಥೋನಿ ಹೊ–ಶುಯೆ ಅವರನ್ನು ಸೋಲಿಸಿದ ಭಾರತದ ಪ್ರಿಯಾಂಶು ರಾಜಾವತ್‌, ಬಹರೇನ್‌ ಇಂಟರ್‌ನ್ಯಾಷನಲ್‌ ಸಿರೀಸ್‌ ಟೂರ್ನಿಯ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ 17 ವರ್ಷ ವಯಸ್ಸಿನ ಪ್ರಿಯಾಂಶು 16–21, 21–7, 21–12ರಲ್ಲಿಆಂಥೋನಿ ಹೊ–ಶುಯೆ ಅವರನ್ನು ಸೋಲಿಸಿದರು.

ಪ್ರಿ ಕ್ವಾರ್ಟರ್‌ನಲ್ಲಿ ಭಾರತ ಆಟಗಾರ, ಎರಡನೇ ಶ್ರೇಯಾಂಕದ ಅಡೆ ರೆಸ್ಕಿ ದ್ವೈಕಾಯೊ ಅವರನ್ನು ಸೋಲಿಸಿದ್ದರು. ಈ ಹಿಂದೆ ಭಾರತದ ಸಮೀರ್‌ ವರ್ಮಾ, ಸೌರಬ್‌ ವರ್ಮಾ, ಸಾಯಿ ಪ್ರಣೀತ್, ಶುಭಂಕರ್‌ ಡೇ ಮತ್ತು ಗುರು ಸಾಯಿದತ್‌ ಅವರು ಬಹರೇನ್‌ ಇಂಟರ್‌ನ್ಯಾಷನಲ್‌ ಸಿರೀಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಆಟಗಾರರಾದ ಜೂಹಿ ದೇವಾಂಗನ್ ಮತ್ತು ವೆಂಕಟ್‌ ಗೌರವ್‌ ಪ್ರಸಾದ್‌ 21–18, 21–16 ರಿಂದ ಥಾಯ್ಲೆಂಡ್‌ನ ಪನ್ನಾವತ್‌ ತೀರಪಣಿತುನ್‌ – ಕನ್ಯಾನತ್‌ ಸುಡಚೊಚಂ್‌ ವರನ್ನು 34 ನಿಮಿಷಗಳಲ್ಲಿ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಭಾರತದ ಜೋಡಿ ಅಗ್ರ ಶ್ರೇಯಾಂಕ ಪಡೆದಿತ್ತು.

ಮಹಿಳೆಯರ ಸಿಂಗಲ್ಸ್‌ನಲ್ಲ ಇರಾ ಶರ್ಮಾ ಎರಡನೇ ಸ್ಥಾನ ಪಡೆದರು. ಇಂಡೊನೇಷ್ಯಾದ ಶ್ರೀಫಾತ್ಮಾವತಿ ಫೈನಲ್‌ನಲ್ಲಿ 21–14, 24–22 ರಲ್ಲಿ ಇರಾ ಮೇಲೆ ಜಯಗಳಿಸಿದ್ದರು.

ಎರಡನೇ ಶ್ರೇಯಾಂಕದ ರೋಹನ್‌ ಕಪೂರ್‌– ಸೌರಬ್‌ ಶರ್ಮಾ 21–19, 16–21, 22–24ರಲ್ಲಿ ಥಾಯ್ಲೆಂಡ್‌ನ ಪ್ರಾದ್‌–ಅಪಿಚಾಸಿಟ್‌ ಜೋಡಿಗೆ ಸೋತು ಪುರುಷರ ಡಬಲ್ಸ್‌ನಲ್ಲಿ ರನ್ನರ್ ಅಪ್‌ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT