ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಜಯ

Last Updated 28 ಜುಲೈ 2019, 20:00 IST
ಅಕ್ಷರ ಗಾತ್ರ

ಮುಂಬೈ: ಪವನ್ ಶೇರಾವತ್ ಅವರ ಅಮೋಘ ಆಟದ ಬಲದಿಂದ ಬೆಂಗಳೂರು ಬುಲ್ಸ್‌ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಭಾನುವಾರ ಯು ಮುಂಬಾ ಎದುರು ರೋಚಕ ಜಯ ಸಾಧಿಸಿತು.

ಎಸ್‌ವಿಪಿ ಸ್ಟೇಷನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 30–26ರಿಂದ ಯು ಮುಂಬಾ ಎದುರು ಗೆದ್ದಿತು. ಬೆಂಗಳೂರು ತಂಡದ ಪ್ರಮುಖ ಆಟಗಾರ ಪವನ್ ಎದುರಾಳಿ ಪಾಳೆಯದ ಮೇಲೆ 21 ಬಾರಿ ದಾಳಿ ಮಾಡಿದರು. ಅದರಲ್ಲಿ 11 ಅಂಕಗಳನ್ನು ಗಳಿಸಿದರು. ಮುಂಬಾ ತಂಡದ ಅರ್ಜುನ್ ದೇಶವಾಲಾ ಆರು ಅಂಕ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ದಬಂಗ್ ಡೆಲ್ಲಿ ತಂಡವು 41–21ರಿಂದ ಹರಿಯಾಣ ವಿರುದ್ಧ ಗೆಲುವು ಸಾಧಿಸಿತು.

ಚಂದ್ರನ್ ರಂಜೀತ್ ಅವರ ಅಮೋಘಆಟದ ಬಲದಿಂದ ಡೆಲ್ಲಿ ತಂಡವು ಸುಲಭವಾಗಿ ಜಯಿಸಿತು.

ಡೆಲ್ಲಿ ತಂಡದ ಚಂದ್ರನ್ ರಂಜೀತ್ ಅವರು ಎದುರಾಳಿ ಅಂಕಣದಲ್ಲಿ 17 ಬಾರಿ ದಾಳಿ ನಡೆಸಿದರು. ಅದರಲ್ಲಿ 11 ಪಾಯಿಂಟ್ಸ್‌ ಕಬಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT