ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ವಾರಿಯರ್ಸ್‌ ಸವಾಲು ಮೀರಿದ ದಬಂಗ್‌

Last Updated 21 ಅಕ್ಟೋಬರ್ 2018, 17:19 IST
ಅಕ್ಷರ ಗಾತ್ರ

ಪುಣೆ: ನವೀನ್‌ ಕುಮಾರ್‌ ಅವರ ಅಮೋಘ ರೈಡಿಂಗ್‌ ಬಲದಿಂದ ದಬಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯ ಪಂದ್ಯದಲ್ಲಿ ಗೆದ್ದಿದೆ.

ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ದಬಂಗ್‌ ಡೆಲ್ಲಿ 39–30 ಪಾಯಿಂಟ್ಸ್‌ನಿಂದ ಬೆಂಗಾಲ್‌ ವಾರಿಯರ್ಸ್‌ ಸವಾಲು ಮೀರಿತು. 22 ರೇಡ್‌ಗಳನ್ನು ಮಾಡಿದ ದಬಂಗ್‌ ತಂಡದ ನವೀನ್‌ 11 ಪಾಯಿಂಟ್ಸ್‌ ಹೆಕ್ಕಿದರು. ರವಿಂದರ್‌ ಪಹಲ್‌ ನಾಲ್ಕು ಟ್ಯಾಕಲ್‌ ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು.

ಆರಂಭದಿಂದಲೇ ಉಭಯ ತಂಡಗಳು ತುರುಸಿನ ಪೈಪೋಟಿ ಕಂಡುಬಂತು

ಎಂಟನೇ ನಿಮಿಷದಲ್ಲಿ ಅಮೋಘ ರೈಡಿಂಗ್‌ ಮಾಡಿದ ಮಣಿಂದರ್‌ ಸಿಂಗ್‌ ಎರಡು ಪಾಯಿಂಟ್ಸ್‌ ಗಳಿಸಿ ಬೆಂಗಾಲ್‌ಗೆ 8–5ರ ಮುನ್ನಡೆ ತಂದುಕೊಟ್ಟರು. 11ನೇ ನಿಮಿಷದಲ್ಲಿ ಎದುರಾಳಿಗಳನ್ನು ಆಲೌಟ್‌ ಮಾಡಿದ ದಬಂಗ್‌ ಡೆಲ್ಲಿ 12–9ರ ಮುನ್ನಡೆ ತನ್ನದಾಗಿಸಿಕೊಂಡಿತು. ಮೊದಲಾರ್ಧದ ಅಂತ್ಯಕ್ಕೆ 16–13ರಿಂದ ಮುಂದಿದ್ದ ಈ ತಂಡ ದ್ವಿತೀಯಾರ್ಧದಲ್ಲೂ ಮೋಡಿ ಮಾಡಿ ಗೆಲುವಿನ ತೋರಣ ಕಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT