ಗುರುವಾರ , ಡಿಸೆಂಬರ್ 5, 2019
20 °C

ಕಬಡ್ಡಿ: ದಬಂಗ್‌ ಡೆಲ್ಲಿ ತಂಡಕ್ಕೆ ಜಯ

Published:
Updated:
Deccan Herald

ನವದೆಹಲಿ: ಮೆರಾಜ್‌ ಶೇಖ್‌, ನವೀನ್‌ ಕುಮಾರ್‌ ಮತ್ತು ಚಂದ್ರನ್‌ ರಂಜಿತ್‌ ಅವರು ಅಮೋಘ ಆಟದ ಮೂಲಕ ಶುಕ್ರವಾರ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಸೇರಿದ್ದ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಇವರ ಮಿಂಚಿನ ರೇಡಿಂಗ್ ನೆರವಿನಿಂದ ದಬಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಪಂದ್ಯದಲ್ಲಿ 48–35 ಪಾಯಿಂಟ್ಸ್‌ನಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಸೋಲಿಸಿತು.

ದಬಂಗ್‌ ತಂಡದ ಮೆರಾಜ್‌ ಒಟ್ಟು 15 ಪಾಯಿಂಟ್ಸ್‌ ಗಳಿಸಿದರು. ನವೀನ್‌ ಮತ್ತು ಚಂದ್ರನ್‌ ತಲಾ ಒಂಬತ್ತು ಪಾಯಿಂಟ್ಸ್‌ ಕಲೆಹಾಕಿದರು.ಪಿಂಕ್‌ ಪ್ಯಾಂಥರ್ಸ್‌ ಪರ ದೀಪಕ್‌ ಹೂಡಾ ಏಕಾಂಗಿ ಹೋರಾಟ ನಡೆಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು