ಶುಕ್ರವಾರ, ಮಾರ್ಚ್ 5, 2021
27 °C

ಪ್ರೊ ಕಬಡ್ಡಿ: ಫಾರ್ಚೂನ್‌ಜೈಂಟ್ಸ್‌ಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ: ಕೆ. ಪ್ರಪಂಚನ್ ಅವರ ಅಮೋಘ ಅಟದ ಬಲದಿಂದ ಗುಜರಾತ್ ಫಾರ್ಚೂನ್‌ ಜೈಂಟ್ಸ್‌ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಜಯಿಸಿತು.

ಗಚ್ಚಿಬೌಲಿ ಒಳಾಂ ಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫಾರ್ಚೂನ್‌ ಜೈಂಟ್ಸ್‌ ತಂಡವು 29 –27ರಿಂದ ಆತಿಥೇಯ ತೆಲುಗು ಟೈಟನ್ಸ್‌ ವಿರುದ್ಧ ಗೆದ್ದಿತು.

ಆರಂಭದಿಂದಲೇ ಆಕ್ರಮಣಕಾರಿ ಅಟವಾಡಿದ ಪ್ರಪಂಚನ್ ಒಟ್ಟು ಹತ್ತು ಪಾಯಿಂಟ್‌ ಗಳಿಸಿದರು. ಅವರಿಗೆ ಉತ್ತಮ ಜೊತೆ ನೀಡಿದ ಸಚಿನ್ ಕೂಡ ಒಂಬತ್ತು ಪಾಯಿಂಟ್‌ಗಳನ್ನು ಗಳಿಸಿದರು. ಟ್ಯಾಕಲ್‌ನಲ್ಲಿ ಮಿಂಚಿದ ಪರವೇಶ್ ಬನ್ಸ್‌ವಾಲ್ ಮೂರು ಅಂಕಗಳನ್ನು ಗಳಿಸಿದರು.

ಛಲದ ಹೋರಾಟ ಮಾಡಿದ ತೆಲುಗು ಟೈಟನ್ಸ್‌ ತಂಡದ ರಾಹುಲ್ ಚೌಧರಿ ರೇಡಿಂಗ್‌ನಲ್ಲಿ  ಆರು ಮತ್ತು ಟ್ಯಾಕಲ್‌ನಲ್ಲಿ ಒಂದು ಪಾಯಿಂಟ್‌ ಗಳಿಸಿದರು.

ಒಂದು ಬೋನಸ್‌ ಪಾಯಿಂಟ್ ಕೂಡ ಪಡೆದು ಆಲ್‌ರೌಂಡ್ ಆಟ ವಾಡಿದರು. ನೀಲೇಶ್ ಸಾಳುಂಕೆ ಒಟ್ಟು ನಾಲ್ಕು ಪಾಯಿಂಟ್‌ ಮತ್ತು ರಕ್ಷಿತ್ ಮೂರು ಪಾಯಿಂಟ್ ಗಳಿಸಿದರು.

ಪ್ರದೀಪ್ ನರ್ವಾಲ್‌ ಭರ್ಜರಿ ಆಟ: ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಪಟ್ನಾ ಪೈರೇಟ್ಸ್‌ 53–36ರಿಂದ ಗೆದ್ದಿತು. ಪ್ರದೀಪ್ ನರ್ವಾಲ್‌ 27 ಪಾಯಿಂಟ್ ಕಲೆ ಹಾಕಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಮಂಜೀತ್ ಆರು ಪಾಯಿಂಟ್ ಗಳಿಸಿದರು. ಪುಣೇರಿಗೆ ಜಿ.ಬಿ.ಮೋರೆ 13 ಪಾಯಿಂಟ್‌ ಗಳಿಸಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು