ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಪಟ್ನಾ, ಹರಿಯಾಣಕ್ಕೆ ಜಯ

Last Updated 8 ಫೆಬ್ರುವರಿ 2022, 19:16 IST
ಅಕ್ಷರ ಗಾತ್ರ

ಬೆಂಗಳೂರು: ಸಚಿನ್ ಅಮೋಘ ದಾಳಿಯ ಬಲದಿಂದ ಪಟ್ನಾ ಪೈರೆಟ್ಸ್‌ ತಂಡವು ಅಮೋಘ ಜಯ ಸಾಧಿಸಿತು.

ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪಟ್ನಾ ತಂಡವು 47–38ರಿಂದ ಯು ಮುಂಬಾ ಎದುರಿಗೆ ಜಯಿಸಿತು. ಸಚಿನ್ 16 ಅಂಕಗಳನ್ನು ಗಳಿಸಿದ ಜಯದ ರೂವಾರಿಯಾದರು. ಗುಮಾನ್ ಸಿಂಗ್ ಕೂಡ 11 ಅಂಕಗಳನ್ನು ಗಳಿಸಿ ತಂಡದ ಜಯಕ್ಕೆ ಕಾಣಿಕೆ ನೀಡಿದರು.

ಮುಂಬಾ ತಂಡದ ಆಭಿಷೇಕ್ ಸಿಂಗ್ 13 ಮತ್ತು ವಿ. ಅಜಿತ್ 11 ಅಂಕಗಳನ್ನು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು 37–29ರಿಂದ ತಮಿಳ್ ತಲೈವಾಸ್ ವಿರುದ್ಧ ಜಯಿಸಿತು.

ಹರಿಯಾಣ ತಂಡದ ಆಶಿಶ್ ಅಮೋಘ ದಾಳಿ ನಡೆಸಿ 16 ಪಾಯಿಂಟ್‌ಗಳಣ್ನು ತಮ್ಮ ಜೇಬಿಗೆ ಹಾಕಿಕೊಂಡರು. ಅವರಿಗೆ ನಾಯಕ ವಿಕಾಶ್ ಖಂಡೋಲಾ (8) ಉತ್ತಮ ಬೆಂಬಲ ನೀಡಿದರು. ತಲೈವಾಸ್ ತಂಡದ ಮಂಜೀತ್ (10) ಮತ್ತು ಅಜಿಂಕ್ಯ ಪವಾರ್ (8) ಉತ್ತಮವಾಗಿ ಆಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT