ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ನಿರಾಶೆ

Last Updated 1 ಡಿಸೆಂಬರ್ 2022, 4:53 IST
ಅಕ್ಷರ ಗಾತ್ರ

ಹೈದರಾಬಾದ್: ಬೆಂಗಳೂರು ಬುಲ್ಸ್ ತಂಡವು ಬುಧವಾರ ಪ್ರೊಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಎದುರು ಪರಾಭವಗೊಂಡಿತು.

ಗಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 25–45ರಿಂದ ಪ್ಯಾಂಥರ್ಸ್‌ಗೆ ಶರಣಾಯಿತು. ಪ್ಯಾಂಥರ್ಸ್ ತಂಡದ ಅರ್ಜುನ್ ದೇಶವಾಲ್ ರೇಡಿಂಗ್‌ನಲ್ಲಿ 13 ಅಂಕಗಳನ್ನು ಗಳಿಸಿದರು. ಅವರೊಂದಿಗೆ ವಿ. ಅಜಿತ್ (6) ಹಾಗೂ ಲಕ್ಕಿ ಶರ್ಮಾ (6) ಕೂಡ ಮಿಂಚಿದರು.

ಮೊದಲಾರ್ಧದಲ್ಲಿಯೇ ಪ್ಯಾಂಥರ್ಸ್ ತಂಡವು 25–10ರ ದೊಡ್ಡ ಅಂತರದ ಮುನ್ನಡೆ ಸಾಧಿಸಿತು. ವಿರಾಮದ ನಂತರವೂ ಮುನ್ನಡೆ ಕಾಯ್ದುಕೊಂಡಿತು.

ಬೆಂಗಳೂರು ತಂಡದ ರೇಡರ್ ಭರತ್ (10) ಉತ್ತಮವಾಗಿ ಆಡಿದರು.

ಪಂದ್ಯ ಟೈ: ದಬಂಗ್ ಡೆಲ್ಲಿ ಹಾಗೂ ತಮಿಳ್ ತಲೈವಾಸ್ ತಂಡಗಳ ನಡುವಣ ನಡೆದ ಇನ್ನೊಂದು ಪಂದ್ಯವು 37–37ರಿಂದ ಟೈ ಆಯಿತು.

ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ (15) ಮತ್ತು ತಲೈವಾಸ್ ತಂಡದ ನರೆಂದರ್ (14) ಮಿಂಚಿದರು.

ಪಂದ್ಯದ ಪ್ರಥಮಾರ್ಧದಲ್ಲಿ ತಲೈವಾಸ್ ತಂಡವು 20–15ರಿಂದ ಡೆಲ್ಲಿ ವಿರುದ್ಧ ಮುನ್ನಡೆಯಲ್ಲಿತ್ತು. ವಿರಾಮದ ನಂತರ ತಿರುಗೇಟು ನೀಡಿದ ಡೆಲ್ಲಿ ದಿಟ್ಟ ಆಟವಾಡಿತು. ಇದರಿಂದಾಗಿ ಉಭಯ ತಂಡಗಳು ಸಮಬಲ ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT