ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ತಮಿಳ ತಲೈವಾಸ್ ಜಯಭೇರಿ

Last Updated 4 ಫೆಬ್ರುವರಿ 2022, 2:26 IST
ಅಕ್ಷರ ಗಾತ್ರ

ಬೆಂಗಳೂರು: ಚುರುಕಿನ ದಾಳಿ ನಡೆಸಿದ ಅಜಿಂಕ್ಯ ಪವಾರ್ ಮತ್ತು ಮಂಜೀತ್ ಅವರ ಆಟದ ಬಲದಿಂದ ತಮಿಳ್ ತಲೈವಾಸ್ ತಂಡವು ಜಯಭೇರಿ ಬಾರಿಸಿತು.

ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವು 43–25ರಿಂದ ತೆಲುಗು ಟೈಟನ್ಸ್‌ ವಿರುದ್ಧ ಜಯಿಸಿತು.

ಮಂಜಿತ್ (9) ಮತ್ತು ಅಜಿಂಕ್ಯ (10) ರೇಡಿಂಗ್‌ನಲ್ಲಿ ಪಾರಮ್ಯ ಮೆರೆದರು. ಡಿಫೆಂಡರ್ ಸಾಗರ್ ಕೂಡ ಒಂಬತ್ತು ಅಂಕ ಕಲೆಹಾಕಿ ತಂಡದ ಜಯಕ್ಕೆ ಕಾಣಿಕೆ ನೀಡಿದರು.

ಟೈಟನ್ಸ್ ತಂಡದ ಗೊಲ್ಲ ರಾಜು (9) ಮಿಂಚಿದರು.

ಜೈಪುರಕ್ಕೆ ಜಯ: ದೀಪಕ್ ಹೂಡಾ ಅವರ ಆಲ್‌ರೌಂಡ್ ಆಟದ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 36–30ರಿಂದ ದಬಂಗ್ ಡೆಲ್ಲಿ ತಂಡದ ವಿರುದ್ಧ ಜಯಭೇರಿ ಬಾರಿಸಿತು.

ದೀಪಕ್ ಹೂಡಾ 12 ಅಂಕಗಳನ್ನು ಸೂರೆ ಮಾಡಿದರು. ಸಚಿನ್ ನರ್ವಾಲ್ ಕೂಡ ನಾಲ್ಕು ಅಂಕಗಳ ಕಾಣಿಕೆ ನೀಡಿದರು.

ಆದರೆದಬಂಗ್ ಡೆಲ್ಲಿ ತಂಡದ ವಿಜಯ್ 16 ಅಂಕ ಗಳಿಸಿದರು. ಆದರೆ ಅವರ ವಿರೋಚಿತ ಆಲ್‌ರೌಂಡ್ ಆಟಕ್ಕೆ ಜಯ ಒಲಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT