ಗುರುವಾರ , ಅಕ್ಟೋಬರ್ 24, 2019
21 °C
ಪಟ್ನಾಗೆ ಭರ್ಜರಿ

ಪ್ರೊ ಕಬಡ್ಡಿ: ಪ್ರದೀಪ್‌ ಪ್ರಹಾರ; ಬೆಂಗಾಲ್‌ ತತ್ತರ

Published:
Updated:
Prajavani

ಗ್ರೇಟರ್‌ ನೊಯ್ಡಾ: ಪ್ರದೀಪ್‌ ನರ್ವಾಲ್‌ ಗಳಿಸಿದ ಅಮೋಘ 36 ಪಾಯಿಂಟ್ಸ್ ಬಲದಿಂದ ಪಟ್ನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್ ತಂಡವನ್ನು 69–41ರಿಂದ ಮಣಿಸಿತು.

ಇಲ್ಲಿಯ ಶಹೀದ್‌ ವಿಜಯ್‌ ಸಿಂಗ್‌ ಪಾಟಿಕ್‌ ಕ್ರೀಡಾಂಗಣದಲ್ಲಿ ಪ್ರದೀಪ್‌ ಸಂಪೂರ್ಣ ಪ್ರಾಬಲ್ಯ ಮೆರೆದರು. ಸೌರಭ್‌ ಪಾಟೀಲ್‌ ರೇಡಿಂಗ್‌ ಮೂಲಕ ಬೆಂಗಾಲ್‌ ತಂಡ ಪಂದ್ಯದಲ್ಲಿ ಮೊದಲ ಪಾಯಿಂಟ್‌ ಗಳಿಸಿತು. 8ನೇ ನಿಮಿಷದಲ್ಲಿ ಆ ತಂಡ 9–8ರಲ್ಲಿ ಮುನ್ನಡೆಯಲ್ಲಿತ್ತು. 10ನೇ ನಿಮಿಷದಲ್ಲಿ 11–9ರಿಂದ ಮುನ್ನಡೆ ಗಳಿಸಿದ ಪಟ್ನಾ ಆ ಬಳಿಕ ಹಿಂದುಳಿಯಲೇ ಇಲ್ಲ. ಮೊದಲಾರ್ಧಕ್ಕೆ 7 ನಿಮಿಷ ಉಳಿದಿರುವಾಗ ಬೆಂಗಾಲ್‌ ತಂಡ ಆಲ್‌ ಔಟ್‌ ಆಯಿತು. ಪಟ್ನಾ 18–9 ಮುನ್ನಡೆ ಸಾಧಿಸಿತು. ಮೊದಲಾರ್ಧ ಮುಕ್ತಾಯಕ್ಕೆ ಆ ತಂಡ 27–17ರ ಮುನ್ನಡೆ ಕಾಯ್ದುಕೊಂಡಿತು. ಪ್ರದೀಪ್‌ ನರ್ವಾಲ್‌ ಈ ಋತುವಿನಲ್ಲಿ 15 ಸೂಪರ್‌ ಟೆನ್‌ ಸಾಧನೆ ಮಾಡಿದರು.

ದ್ವಿತೀಯಾರ್ಧದಲ್ಲಿ ಪಟ್ನಾ ಇನ್ನಷ್ಟು ಪರಿಣಾಮಕಾರಿ ಆಟವಾಡಿತು. ಪಂದ್ಯ ಮುಕ್ತಾಯಕ್ಕೆ ಮೂರು ನಿಮಿಷ ಉಳಿದಿರುವಾಗ ಪ್ರದೀಪ್‌ ಮೋಡಿ ಮಾಡಿದರು. ರೇಡಿಂಗ್‌ನಲ್ಲಿ ಆರು ಆಟಗಾರರನ್ನು ಔಟ್‌ ಮಾಡಿದರು. ಬೆಂಗಾಲ್ ಚೇತರಿಸಿಕೊಳ್ಳಲೇ ಇಲ್ಲ. ಆ ತಂಡದ ಪರ ಸೌರಭ್‌ ಪಾಟೀಲ್‌ 11 ಹಾಗೂ ರಾಕೇಶ್‌ ನರ್ವಾಲ್‌ 10 ಪಾಯಿಂಟ್‌ ಗಳಿಸಿ ಮಿಂಚಿದರು.

ಯುಪಿ ಯೋಧಾಗೆ ಜಯ: ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾ ತಂಡ ಪುಣೇರಿ ಪಲ್ಟನ್‌ ಎದುರು 43–39 ಅಂತರದಿಂದ ಗೆಲುವು ಸಾಧಿಸಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)