ಸೋಮವಾರ, ನವೆಂಬರ್ 18, 2019
23 °C
7ನೇ ಆವೃತ್ತಿಯಲ್ಲಿ 10ನೇ ಸೂಪರ್ ಟೆನ್, 200 ರೇಡಿಂಗ್ ಪಾಯಿಂಟ್ ಗಳಿಸಿದ ಪ್ರದೀಪ್ ನರ್ವಾಲ್

ಪ್ರೊ ಕಬಡ್ಡಿ ಲೀಗ್‌: ಬುಲ್ಸ್ ಪಳಗಿಸಿದ ಪಲ್ಟನ್

Published:
Updated:
Prajavani

ಪುಣೆ: ಪಂಕಜ್‌ ಮೋಹಿತೆ ಅವರ ಪರಿಣಾಮಕಾರಿ ರೇಡಿಂಗ್ ಬಲದಿಂದ ತವರಿನ ಪ್ರೇಕ್ಷಕರೆದುರು ಮಿಂಚಿದ ಪುಣೇರಿ ಪಲ್ಟನ್ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಶುಕ್ರವಾರ ಬೆಂಗಳೂರು ಬುಲ್ಸ್‌ ತಂಡವನ್ನು 42–38 ಪಾಯಿಂಟ್‌ಗಳಿಂದ ಸೋಲಿಸಿತು.

ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಪಲ್ಟನ್‌ ತಂಡ, ವಿರಾಮದ ನಂತರ ಬಹುತೇಕ ಅವಧಿಯಲ್ಲಿ 9 ರಿಂದ 10 ಪಾಯಿಂಟ್‌ಗಳ ಮುನ್ನಡೆ ಸಾಧಿಸಿತು. ಕೊನೆಯ ಮೂರು ನಿಮಿಷಗಳಿದ್ದಾಗ 39–30 ಪಾಯಿಂಟ್‌ಗಳ ಮುನ್ನಡೆ ಸಾಧಿಸಿತ್ತು. ಕೊನೆಗಳಿಗೆಯಲ್ಲಿ ಪರಿಣಾ ಮಕಾರಿಯಾದ ಪವನ್‌ ಕೆಲವು ರೇಡಿಂಗ್‌ ಪಾಯಿಂಟ್‌ಗಳ ಮೂಲಕ ಅಂತರ ತಗ್ಗಿಸಿದರು. 

ಬೆಂಗಳೂರು ಕಡೆ ಪ್ರಮುಖ ರೇಡರ್‌ಗಳಾದ ರೋಹಿತ್‌ ಕುಮಾರ್‌ ಮತ್ತು ಪವನ್‌ ಶೆರಾವತ್‌ 14 ಮತ್ತು 12 ಪಾಯಿಂಟ್ಸ್‌ ಗಳಿಸಿದರು. ಆದರೆ ಮೊದಲಾರ್ಧ ಮತ್ತು ವಿರಾಮದ ನಂತರ ಕೆಲವು ಅವಧಿಯಲ್ಲಿ ಪವನ್‌ ಪರಿಣಾಮಕಾರಿ ಆಗಿರಲಿಲ್ಲ. ಇದು ಹಿನ್ನಡೆಗೆ ಕಾರಣವಾಯಿತು.

ಬೆಂಗಳೂರು 17 ಪಂದ್ಯಗಳಿಂದ 49 ಅಂಕಗಳೊಡನೆ ನಾಲ್ಕನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಈ ಪಂದ್ಯದ ಮೂಲಕ ರೋಹಿತ್‌ ಕುಮಾರ್‌ ಲೀಗ್‌ನಲ್ಲಿ 700 ಪಾಯಿಂಟ್‌ ಕೆಲಹಾಕಿದರು. ಪವನ್‌ ಶೆರಾವತ್‌ 550 ರೇಡಿಂಗ್‌ ಪಾಯಿಂಟ್ಸ್ ಪೂರೈಸಿದರು.

ಪೈರೇಟ್ಸ್ - ಟೈಟನ್ಸ್ ಪಂದ್ಯ ಟೈ: ಮೊದಲ ಪಂದ್ಯದಲ್ಲಿ ಬಲಿಷ್ಠ ಪಟ್ನಾ ಪೈರೇಟ್ಸ್ ಮತ್ತು ತೆಲುಗು ಟೈಟನ್ಸ್ ಆಟಗಾರರು ಸಮಬಲದ ಕಾದಾಟದ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ರಸದೂಟ ಉಣಬಡಿಸಿದರು. ಪಂದ್ಯ 42–42ರಲ್ಲಿ ಟೈ ಆಯಿತು.

ಆರಂಭದಲ್ಲಿ ತೀವ್ರ ಹಿನ್ನಡೆಯಲ್ಲಿದ್ದ ಪಟ್ನಾ ನಂತರ ಚೇತರಿಸಿಕೊಂಡು ಮೊದಲಾರ್ಧದ ಮುಕ್ತಾಯಕ್ಕೆ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಇಬ್ಬರು ಪ್ರಮುಖ ರೇಡರ್‌ಗಳಾದ ಸಿದ್ಧಾರ್ಥ್‌ ದೇಸಾಯಿ ಮತ್ತು ಪ್ರದೀಪ್ ನರ್ವಾಲ್ ನಡುವಿನ ಹಣಾಹಣಿ ಎಂದೇ ಬಿಂಬಿಸಲಾಗಿದ್ದ ಈ ಪಂದ್ಯದ ಮೊದಲ ರೇಡ್‌ನಲ್ಲಿ ಸಿದ್ಧಾರ್ಥ್‌ ಪಾಯಿಂಟ್ ಗಳಿಸಿದರು.

ಆದರೆ ಪ್ರದೀಪ್ ವಿಫಲರಾದರು. ಜಾಂಗ್ ಕುನ್ ಲೀ ಅವರು ಪಟ್ನಾ ಪೈರೇಟ್ಸ್‌ಗೆ ಮೊದಲ ಪಾಯಿಂಟ್ ಗಳಿಸಿಕೊಟ್ಟರು. ಎರಡನೇ ನಿಮಿಷದಲ್ಲಿ ಸಿದ್ಧಾರ್ಥ್ ದೇಸಾಯಿ ಅವರನ್ನು ಹಿಡಿದು ಹಾದಿ ಒಶ್ತಾಕ್‌ 100 ಟ್ಯಾಕಲ್ ಪಾಯಿಂಟ್‌ ಗಳನ್ನು ಪೂರೈಸಿದರು. 50ನೇ ಪಂದ್ಯ ಆಡಿದ ಮೋನು ಒಳಗೊಂಡಂತೆ ಮೂವ ರನ್ನು ಔಟ್‌ ಮಾಡಿ ‘ಸೂಪರ್’ ಸಾಧನೆ ಮಾಡಿದ ರಜನೀಶ್‌ ಮುನ್ನಡೆಗೆ ಕಾರಣರಾದರು.

ಪ್ರತಿಕ್ರಿಯಿಸಿ (+)