ಮಂಗಳವಾರ, ಅಕ್ಟೋಬರ್ 22, 2019
21 °C

ಕಬಡ್ಡಿ: ನವೀನ್ ಕುಮಾರ್ ಮಿಂಚಿನಾಟ

Published:
Updated:

ಪಂಚಕುಲ, ಹರಿಯಾಣ: ನವೀನ್ ಕುಮಾರ್ ಮತ್ತೊಮ್ಮೆ ಮಿಂಚಿನ ರೇಡಿಂಗ್ ಮೂಲಕ ಎದುರಾಳಿ ತಂಡದವರನ್ನು ಬೆಚ್ಚಿ ಬೀಳಿಸಿದರು. ಅವರ ಪರಿಣಾಮಕಾರಿ ಆಟದಿಂದಾಗಿ ದಬಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಭರ್ಜರಿ ಜಯ ಗಳಿಸಿತು. 40–60ರ ಸೋಲು ಕಂಡ ಪುಣೇರಿ ತಂಡ ಟೂರ್ನಿಯಿಂದ ಹೊರಬಿದ್ದಿತು. 

ಮತ್ತೊಮ್ಮೆ ‘ಸೂಪರ್ ಟೆನ್’ ಮೂಲಕ ನವೀನ್ ಕುಮಾರ್ ಮಿಂಚು ಹರಿಸಿದರು. ಇದು ಅವರ ಸತತ 17ನೇ ಸೂಪರ್ ಟೆನ್ ಸಾಧನೆಯಾಗಿದೆ.

ಏಳನೇ ನಿಮಿಷದಲ್ಲೇ ಪುಣೇರಿಯನ್ನು ಆಲ್‌ ಔಟ್ ಮಾಡಿದ ಡೆಲ್ಲಿ ನಂತರವೂ ಪಾಯಿಂಟ್ ಗಳಿಸುತ್ತ ಸಾಗಿತು. ರವೀಂದ್ರ ಪೆಹಲ್ 50ನೇ ಸೂಪರ್ ಟ್ಯಾಕಲ್‌ ಪಾಯಿಂಟ್‌ ಗಳಿಸಿದರು. ನವೀನ್ ಕುಮಾರ್ ವೇಗವಾಗಿ 400 ಪಾಯಿಂಟ್‌ಗಳನ್ನು ಗಳಿಸಿದ ಆಟಗಾರ ಎಂದೆನಿಸಿಕೊಂಡರು.

ಮತ್ತೊಂದು ಪಂದ್ಯದಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು ಹರಿಯಾಣ ಸ್ಟೀಲರ್ಸ್ 38–37 ಪಾಯಿಂಟ್‌ಗಳಿಂದ ಮಣಿಸಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)