ಶನಿವಾರ, ನವೆಂಬರ್ 23, 2019
23 °C

ಪುಣೇರಿಗೆ ತಲೈವಾಸ್‌ ಸವಾಲು

Published:
Updated:
Prajavani

ಪುಣೆ: ಈ ಬಾರಿ ತವರಿನ ಅಂಗಳದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗೆದ್ದು ನಂತರ ಪಟ್ನಾ ಪೈರೇಟ್ಸ್‌ಗೆ ಶರಣಾಗಿದ್ದ ಪುಣೇರಿ ಪಲ್ಟನ್‌ ತಂಡ ಈಗ ಮತ್ತೆ ಜಯದ ಮಂತ್ರ ಜಪಿಸುತ್ತಿದೆ.

ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆಯುವ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಹಣಾಹಣಿಯಲ್ಲಿ ಸುರ್ಜೀತ್‌ ಸಿಂಗ್‌ ಬಳಗವು ದುರ್ಬಲ ತಮಿಳ್‌ ತಲೈವಾಸ್‌ ವಿರುದ್ಧ ಆಡಲಿದೆ. ಅಜಯ್‌ ಠಾಕೂರ್‌ ಸಾರಥ್ಯದ ತಲೈವಾಸ್‌ ಹಿಂದಿನ ಎಂಟು ಪಂದ್ಯಗಳಲ್ಲೂ ಸೋತಿದೆ.

ಈ ಸಲದ ಲೀಗ್‌ನಲ್ಲಿ ಒಟ್ಟು 16 ಪಂದ್ಯಗಳನ್ನು ಆಡಿರುವ ಪುಣೇರಿ, ಐದರಲ್ಲಿ ಗೆದ್ದು ಒಂಬತ್ತರಲ್ಲಿ ಸೋತಿದೆ. ಎರಡು ಪಂದ್ಯಗಳು ಟೈ ಆಗಿವೆ. 34 ಪಾಯಿಂಟ್ಸ್‌ ಕಲೆಹಾಕಿರುವ ಈ ತಂಡ ಪಟ್ಟಿಯಲ್ಲಿ 10ನೇ ಸ್ಥಾನ ಹೊಂದಿದೆ. ತಲೈವಾಸ್‌ ಕೊನೆಯ ಸ್ಥಾನ ಹೊಂದಿದೆ. ಈ ತಂಡದ ಖಾತೆಯಲ್ಲಿ 27 ಪಾಯಿಂಟ್ಸ್‌ ಇವೆ.

ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ ಮತ್ತು ಯು.ಪಿ.ಯೋಧಾ ಮುಖಾಮುಖಿಯಾಗಲಿವೆ. ಈ ಹಣಾಹಣಿಯಲ್ಲಿ ಗೆದ್ದು ನಾಲ್ಕನೇ ಸ್ಥಾನಕ್ಕೇರಲು ಯೋಧಾ ತಂಡ ಹವಣಿಸುತ್ತಿದೆ. ಮುಂಬಾ ಕೂಡ ಜಯದ ವಿಶ್ವಾಸದಲ್ಲಿದೆ.

ಪ್ರತಿಕ್ರಿಯಿಸಿ (+)