ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಪ್ಲೇ ಆಫ್‌ಗೆ ಪುಣೇರಿ

Last Updated 5 ಡಿಸೆಂಬರ್ 2022, 21:33 IST
ಅಕ್ಷರ ಗಾತ್ರ

ಹೈದರಾಬಾದ್‌: ಪುಣೇರಿ ಪಲ್ಟನ್‌ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ ತಂಡವನ್ನು 44–30 ಪಾಯಿಂಟ್ಸ್‌ಗಳಿಂದ ಮಣಿಸಿತು.

ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಕಾಶ್‌ ಶಿಂಧೆ (13 ಪಾಯಿಂಟ್ಸ್‌) ಮತ್ತು ಮೊಹಮ್ಮದ್‌ ನಬಿ ಭಕ್ಷ್‌ (9 ಪಾಯಿಂಟ್ಸ್‌) ಅವರು ಪಲ್ಟನ್‌ ತಂಡದ ಗೆಲುವಿಗೆ ಕಾರಣರಾದರು.

ಪ್ರಥಮಾರ್ಧ ಕೊನೆಗೊಂಡಾಗ ಪುಣೆಯ ತಂಡ 19–10 ರಲ್ಲಿ ಮುನ್ನಡೆ ಗಳಿಸಿತ್ತು. ಪಟ್ನಾ ತಂಡದ ಸಚಿನ್‌ 10 ಪಾಯಿಂಟ್ಸ್‌ ತಂದಿತ್ತರು.

ದಿನದ 2ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ 44–30 ರಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಸೋಲಿಸಿತು. ವಿರಾಮದ ವೇಳೆಗೆ 21–15 ರಲ್ಲಿ ಮೇಲುಗೈ ಸಾಧಿಸಿದ್ದ ಪ್ಯಾಂಥರ್ಸ್‌ ಪರ ಅಜಿತ್‌ ಅವರು 13 ಪಾಯಿಂಟ್ಸ್ ಗಳಿಸಿದರು.

ಪ್ಲೇ ಆಫ್‌ಗೆ ಅರ್ಹತೆ: 21 ಪಂದ್ಯಗಳಿಂದ 79 ಪಾಯಿಂಟ್ಸ್ ಕಲೆಹಾಕಿರುವ ಪಲ್ಟನ್‌, ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿ, ಪ್ಲೇ ಆಫ್‌ಗೆ ಅರ್ಹತೆ ಗಳಿಸಿದೆ. ಮೊದಲ ಸ್ಥಾನದಲ್ಲಿರುವ ಜೈಪುರ ಪಿಂಕ್‌ ಪ್ಯಾಂಥರ್ಸ್‌, ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್‌ ಮತ್ತು ಯು.ಪಿ. ಯೋಧಾಸ್‌ ತಂಡಗಳೂ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿವೆ.

ಇಂದಿನ ಪಂದ್ಯಗಳು: ಯು ಮುಂಬಾ–ದಬಾಂಗ್‌ ಡೆಲ್ಲಿ. ಗುಜರಾತ್‌ ಜೈಂಟ್ಸ್‌– ತೆಲುಗು ಟೈಟನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT