ಪ್ರೊ ಕಬಡ್ಡಿ: ಟೈಟನ್ಸ್‌ಗೆ ರೋಚಕ ಜಯ

7

ಪ್ರೊ ಕಬಡ್ಡಿ: ಟೈಟನ್ಸ್‌ಗೆ ರೋಚಕ ಜಯ

Published:
Updated:
Deccan Herald

ಮುಂಬೈ: ಕೊನೆಯ ಎರಡು ನಿಮಿಷಗಳು ಇರುವಾಗ ಸಂದೀಪ್ ನರ್ವಾಲ್ ಅಮೋಘ ಸಾಮರ್ಥ್ಯ ತೋರಿ ಮಹತ್ವದ ಮೂರು ಪಾಯಿಂಟ್ ಗಳಿಸಿದರು. ಆದರೆ ಮುನ್ನಡೆಯನ್ನು ಉಳಿಸಿಕೊಂಡು ಸಾಗಿದ ತೆಲುಗು ಟೈಟನ್ಸ್‌ ಜಯ ಬಿಟ್ಟುಕೊಡಲು ಸಿದ್ಧವಿರಲಿಲ್ಲ.

ಮಂಗಳವಾರ ರಾತ್ರಿ ಇಲ್ಲಿನ ರಾಷ್ಟ್ರೀಯ ಕ್ರೀಡಾ ಕೇಂದ್ರದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಟೈಟನ್ಸ್‌ ತಂಡ ಪುಣೇರಿ ಪಲ್ಟನ್‌ ವಿರುದ್ಧ 28–25ರಿಂದ ಗೆದ್ದಿತು. ಪಂದ್ಯದ ಮೊದಲ ನಾಲ್ಕು ರೈಡ್‌ಗಳಲ್ಲಿ ಉಭಯ ತಂಡಗಳಿಗೂ ಪಾಯಿಂಟ್ ಗಳಿಸಲು ಆಗಲಿಲ್ಲ. ರಾಜೇಶ್ ಮೊಂಡಲ್ ಮೊದಲ ಪಾಯಿಂಟ್‌ ಗಳಿಸಿ ಪುಣೇರಿಯ ಖಾತೆ ತೆರೆದರು. ಆದರೆ ಮುಂದಿನ ರೈಡ್‌ನಲ್ಲಿ ನೀಲೇಶ್ ಸಾಲುಂಕೆ ಮೂರು ಪಾಯಿಂಟ್ ಗಳಿಸಿ ತಿರುಗೇಟು ನೀಡಿದರು.

ನಂತರ ನಿರಂತರವಾಗಿ ಮುನ್ನಡೆ ಉಳಿಸುತ್ತ ಸಾಗಿದ ಟೈಟನ್ಸ್‌ ಮೊದಲಾರ್ಧದ ಅಂತ್ಯಕ್ಕೆ 17–11ರ ಮುನ್ನಡೆ ಸಾಧಿಸಿತು. ಕೊನೆಯಲ್ಲಿ ಪಂದ್ಯ ರೋಚಕವಾಯಿತು. ಆದರೆ ಗೆಲುವು ಟೈಟನ್ಸ್ ಪಾಲಾಯಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !