ಸ್ಪಾರ್ಟನ್ಸ್‌ಗೆ ಪ್ರಶಸ್ತಿ ಸಂಭ್ರಮ

ಶನಿವಾರ, ಮೇ 25, 2019
22 °C
ಪ್ರೊ ವಾಲಿಬಾಲ್ ಲೀಗ್‌: ಫೈನಲ್‌ನಲ್ಲಿ ಕ್ಯಾಲಿಕಟ್‌ ಹೀರೋಸ್‌ಗೆ ನಿರಾಸೆ

ಸ್ಪಾರ್ಟನ್ಸ್‌ಗೆ ಪ್ರಶಸ್ತಿ ಸಂಭ್ರಮ

Published:
Updated:
Prajavani

ಚೆನ್ನೈ: ತವರಿನ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ ಚೆನ್ನೈ ಸ್ಪಾರ್ಟನ್ಸ್‌ ತಂಡದವರು ಚೊಚ್ಚಲ ಪ್ರೊ ವಾಲಿಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ರೂಡಿ ವೆರಾಫ್ ಮತ್ತು ನವೀನ್ ರಾಜ ಜೇಕಬ್ ಅವರು ಗೆಲುವಿನ ರೂವಾರಿಯಾದರು.

ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಏಕಪಕ್ಷೀಯ ಫೈನಲ್‌ನಲ್ಲಿ ಚೆನ್ನೈ ತಂಡ ಕ್ಯಾಲಿಕಟ್‌ ಹೀರೋಸ್ ಎದುರು 15–11, 15–12, 16–14ರಿಂದ ಗೆದ್ದಿತು.

ರೂಡಿ ವೆರಾಫ್ 11 ಸ್ಪೈಕ್ಸ್‌ ಒಳಗೊಂಡಂತೆ 13 ಪಾಯಿಂಟ್ಸ್ ಕಲೆ ಹಾಕಿದರು. ನವೀನ್ ರಾಜ ಆರು ಸ್ಪೈಕ್ಸ್ ಮತ್ತು ಎರಡು ಸರ್ವ್‌ ಪಾಯಿಂಟ್‌ಗಳೊಂದಿಗೆ ಮಿಂಚಿದರು. ಅಖಿನ್ ಜಿ.ಎಸ್ ಮತ್ತು ರುಸ್ಲಾನ್ಸ್ ಸೊರೊಕಿನ್ಸ್ ತಲಾ ನಾಲ್ಕು ಪಾಯಿಂಟ್ ಕಬಳಿಸಿದರು.

ಕ್ಯಾಲಿಕಟ್‌ ಹೀರೊಸ್‌ ಪರ ಅಜಿತ್ ಲಾಲ್ ಒಂಬತ್ತು ಸ್ಪೈಕ್ಸ್‌ ಗಳಿಸಿದರು. ಪಾಲ್ ಲೋಟ್‌ಮನ್‌ ಆರು ಪಾಯಿಂಟ್ ಗಳಿಸಿದರೆ ಜೆರೋಮ್ ವಿನೀತ್ ಐದು ಪಾಯಿಂಟ್‌ ಕಲೆ ಹಾಕಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !