ವಾಲಿಬಾಲ್: ಕ್ಯಾಲಿಕಟ್‌ಗೆ ಜಯ
ಕೊಚ್ಚಿ: ಐದು ಸೆಟ್‌ಗಳಲ್ಲೂ ಪ್ರಾಬಲ್ಯ ಮೆರೆದ ಕ್ಯಾಲಿಕಟ್ ಹೀರೋಸ್ ತಂಡ ಪ್ರೊ ವಾಲಿಬಾಲ್ ಲೀಗ್‌ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.
ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಕ್ಯಾಲಿಕಟ್ 15–11, 15–9, 15–14, 15–13, 15–10ರಿಂದ ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡವನ್ನು ಮಣಿಸಿತು.
ಕ್ಯಾಲಿಕಟ್ ತಂಡದ ಜೆರೋಮ್ ವಿನೀತ್ ಒಟ್ಟು 16 ಪಾಯಿಂಟ್ಸ್ ಗಳಿಸಿ ಮಿಂಚಿದರು. ಕರ್ನಾಟಕದ ಎ.ಕಾರ್ತಿಕ್ 13 ಪಾಯಿಂಟ್ಸ್ ಹೆಕ್ಕಿದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All