ಪ್ರೊ ವಾಲಿಬಾಲ್‌ ಲೀಗ್‌: ಹರಾಜಿಗೆ ಡೇವಿಡ್‌ ಲಭ್ಯ

7

ಪ್ರೊ ವಾಲಿಬಾಲ್‌ ಲೀಗ್‌: ಹರಾಜಿಗೆ ಡೇವಿಡ್‌ ಲಭ್ಯ

Published:
Updated:

ನವದೆಹಲಿ: ಅಮೆರಿಕದ ದಿಗ್ಗಜ ಆಟಗಾರ ಡೇವಿಡ್‌ ಲೀ ಅವರು ಚೊಚ್ಚಲ ಆವೃತ್ತಿಯ ಪ್ರೊ ವಾಲಿಬಾಲ್‌ ಲೀಗ್‌ ಆಟಗಾರರ ಹರಾಜಿಗೆ ಲಭ್ಯರಿದ್ದಾರೆ.

ಬೇಸ್‌ಲೈನ್‌ ವೆಂಚರ್ಸ್‌ ಮತ್ತು ಭಾರತ ವಾಲಿಬಾಲ್‌ ಫೆಡರೇಷನ್‌ ಸಹಯೋಗದಲ್ಲಿ ಆಯೋಜನೆಯಾಗಿರುವ ಈ ಲೀಗ್‌ನ ಹರಾಜು ಪ್ರಕ್ರಿಯೆ ಡಿಸೆಂಬರ್‌ 14ರಂದು ನಡೆಯಲಿದೆ.

ಒಟ್ಟು 117 ಮಂದಿ ಆಟಗಾರರು ಹರಾಜಿಗೆ ಲಭ್ಯರಿದ್ದು ಇವರನ್ನು ಐಕಾನ್‌ ಆಟಗಾರರು, ಭಾರತದ ಹಿರಿಯ ಆಟಗಾರರು, ದೇಶಿ ಆಟಗಾರರು ಮತ್ತು 21 ವರ್ಷದೊಳಗಿನವರ ಆಟಗಾರರು ಎಂದು ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ.

ಕೆನಡಾದ ರೂಡಿ ವರ್ಹೊಫ್‌, ಅಮೆರಿಕದ ಪಾಲ್‌ ಲಾಟ್‌ಮನ್‌ ಮತ್ತು ಕ್ಯಾರ್ಸನ್‌ ಕ್ಲಾರ್ಕ್‌, ಸರ್ಬಿಯಾದ ನೊವಿಕಾ ಜೆಲಿಕಾ ಮತ್ತು ಟರ್ಕಿಯ ಟೊಮಿಸ್ಲಾವ್‌ ಕೊಸ್ಕೊವಿಚ್‌ ಅವರು ಹರಾಜಿನಲ್ಲಿ ಭಾಗವಹಿಸಲಿರುವ ಪ್ರಮುಖ ವಿದೇಶಿ ಆಟಗಾರರಾಗಿದ್ದಾರೆ.

ಭಾರತದ ಅಖಿನ್‌, ಉಕ್ರ ಪಾಂಡಿಯನ್‌, ದೀಪೇಶ್‌, ಗುರಿಂದರ್‌ ಸಿಂಗ್‌, ವಿನೀತ್‌ ಕುಮಾರ್‌, ಜೆರೋಮ್‌ ವಿನಿತ್‌ ಮತ್ತು ಎಸ್‌.ಪ್ರಭಾಕರನ್‌ ಅವರು ಹರಾಜಿಗೆ ಲಭ್ಯರಿದ್ದಾರೆ.

ಒಟ್ಟು ಆರು ಫ್ರಾಂಚೈಸ್‌ಗಳು ಹರಾಜಿನಲ್ಲಿ ಭಾಗವಹಿಸಲಿದ್ದು ಗರಿಷ್ಠ 12 ಮಂದಿಯನ್ನು ಸೆಳೆದುಕೊಳ್ಳಬಹುದಾಗಿದೆ. ಫೆಬ್ರುವರಿ 2ರಿಂದ 22ರವರೆಗೆ ಚೆನ್ನೈ ಮತ್ತು ಕೊಚ್ಚಿಯಲ್ಲಿ ಲೀಗ್‌ನ ಪಂದ್ಯಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !