ಪ್ರೊ ಕುಸ್ತಿ: ಪಂಜಾಬ್‌ಗೆ ಜಯ ತಂದಿತ್ತ ಬಜರಂಗ್‌

7

ಪ್ರೊ ಕುಸ್ತಿ: ಪಂಜಾಬ್‌ಗೆ ಜಯ ತಂದಿತ್ತ ಬಜರಂಗ್‌

Published:
Updated:
Prajavani

ಲುಧಿಯಾನ: ನಿರ್ಣಾಯಕ ಹಣಾಹಣಿಯಲ್ಲಿ ಅಮೋಘ ಸಾಮರ್ಥ್ಯ ತೋರಿದ ಬಜರಂಗ್‌ ಪುನಿಯಾ, ಪ್ರೊ ಕುಸ್ತಿ ಲೀಗ್‌ (ಪಿಡಬ್ಲ್ಯುಎಲ್‌) ಎರಡನೇ ಆವೃತ್ತಿಯಲ್ಲಿ ಪಂಜಾಬ್‌ ರಾಯಲ್ಸ್‌ಗೆ ಮೊದಲ ಗೆಲುವು ತಂದುಕೊಟ್ಟರು.

ಮುನ್ಸಿಪಲ್‌ ಕಾರ್ಪೊರೇಷನ್‌ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಂಜಾಬ್‌ 4–3ರಿಂದ ಡೆಲ್ಲಿ ಸುಲ್ತಾನ್ಸ್‌ ತಂಡವನ್ನು ಸೋಲಿಸಿತು.

ಪುರುಷರ 74 ಕೆ.ಜಿ. ವಿಭಾಗದಲ್ಲಿ ಖೇತಿಕ್‌ ಸಬಲೋವ್‌ 14–0ರಿಂದ ವಿನೋದ್‌ ಕುಮಾರ್‌ ಅವರನ್ನು ಮಣಿಸಿ ಡೆಲ್ಲಿಗೆ 1–0 ಮುನ್ನಡೆ ತಂದುಕೊಟ್ಟರು.

ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಪಂಜಾಬ್‌ ತಂಡದ ಸಿಂಥಿಯಾ ವೆಸ್ಕಾನ್‌ 2–1ರಿಂದ ಅನಸ್ತೇಸಿಯಾ ಶುಸ್ಟೋವಾ ಎದುರು ಗೆದ್ದರು.

ಪುರುಷರ 84 ಕೆ.ಜಿ. ವಿಭಾಗದ ಪೈಪೋಟಿಯಲ್ಲಿ ಡಾಟೊ ಮಗರಿಸ್ವಿಲಿ 12–0ರಿಂದ ಪ್ರವೀಣ್‌ ಅವರನ್ನು ಮಣಿಸಿ ಪಂಜಾಬ್‌ ತಂಡದ ಮುನ್ನಡೆಗೆ ಕಾರಣರಾದರು.

ಮಹಿಳೆಯರ 53 ಕೆ.ಜಿ. ವಿಭಾಗದ ಹೋರಾಟದಲ್ಲಿ ಅಂಜು ಎದುರು ಗೆದ್ದ ಪಿಂಕಿ, ಡೆಲ್ಲಿ ತಂಡ 2–2ರಿಂದ ಸಮಬಲ ಸಾಧಿಸಲು ನೆರವಾದರು.

ನಂತರದ ಪಂದ್ಯದಲ್ಲಿ (ಪುರುಷರ 125 ಕೆ.ಜಿ) ಪಂಜಾಬ್‌ ತಂಡದ ಕೋರಿ ಜಾರ್ವಿಸ್‌ 7–2ರಿಂದ ಸತೇಂದರ್‌ ಮಲಿಕ್‌ ಎದುರು ಗೆದ್ದರು. ಮಹಿಳೆಯರ 62 ಕೆ.ಜಿ. ವಿಭಾಗದಲ್ಲಿ ಡೆಲ್ಲಿ ತಂಡದ ಸಾಕ್ಷಿ ಮಲಿಕ್‌ 11–0ರಿಂದ ಅನಿತಾ ಅವರನ್ನು ಮಣಿಸಿದ್ದರಿಂದ 3–3 ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಪುರುಷರ 65 ಕೆ.ಜಿ. ಸ್ಪರ್ಧೆಯಲ್ಲಿ ಬಜರಂಗ್‌ 9–0ರಿಂದ ಆ್ಯಂಡ್ರೆ ಕ್ವಿಯಾಟ್‌ಕೊವಿಸ್ಕಿ ಎದುರು ಜಯಿಸಿ ಪಂಜಾಬ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !