ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಮಾ ಜೊತೆ ದ್ಯುತಿ ಒಪ್ಪಂದ

Last Updated 8 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಯತ್ನದಲ್ಲಿರುವ ಭಾರತದ ಸ್ಪ್ರಿಂಟರ್‌ ದ್ಯುತಿ ಚಾಂದ್‌, ಜರ್ಮನಿಯ ಕ್ರೀಡಾ ಉತ್ಪನ್ನಗಳ ತಯಾರಕರಾದ ‘ಪೂಮಾ’ ಜೊತೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ‘ಪೂಮಾ’ ಗುರುವಾರ ಈ ವಿಷಯ ತಿಳಿಸಿದೆ.

ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ 23 ವರ್ಷದ ದ್ಯುತಿ 100 ಮೀ. ಮತ್ತು 200 ಮೀ. ಓಟದ ಸ್ಪರ್ಧೆಗಳಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಈ ವರ್ಷ ಇಟಲಿಯಲ್ಲಿ ನಡೆದ ಯುನಿವರ್ಸೇಡ್‌ನಲ್ಲೂ (ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್‌) ವೇಗದ ಓಟಗಾರ್ತಿ ಎನಿಸಿದ್ದರು.

‘ಮೊದಲ ಬಾರಿ ಬ್ರಾಂಡ್‌ ಜೊತೆ ಗುರುತಿಸಿಕೊಳ್ಳುತ್ತಿದ್ದೇನೆ. ಉಸೇನ್‌ ಬೋಲ್ಟ್‌ ಅವರಂಥ ವಿಶ್ವ ಶ್ರೇಷ್ಠ ಅಥ್ಲೀಟುಗಳ ಜೊತೆ ಕೆಲಸ ಮಾಡಿದ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ ಹೆಮ್ಮೆಯೆನಿಸುತ್ತಿದೆ’ ಎಂದಿದ್ದಾರೆ ದ್ಯುತಿ.

ದಕ್ಷಿಣ ಆಫ್ರಿಕದ ಓಟಗಾರ್ತಿ ಕಾಸ್ಟೆರ್‌ ಸೆಮನ್ಯಾ ಅವರಂತೆ, 23 ವರ್ಷದ ಧ್ಯುತಿ ಹೆಚ್ಚಿನ ಪ್ರಮಾಣದ ಆ್ಯಂಡ್ರೊಜೆನ್‌ (ಪುರುಷ ಹಾರ್ಮೋನ್‌) ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ 2015ರಲ್ಲಿ ಕ್ರೀಡಾ ನ್ಯಾಯಮಂಡಳಿ (ಸಿಎಎಸ್‌) ಅವರಿಗೆ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT