ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್: ಸರ್ಕಾರಿ ಶಾಲೆಗಳಿಗೆ ಹಾಕಿ ಆಟಗಾರರ ಹೆಸರು

Last Updated 22 ಆಗಸ್ಟ್ 2021, 13:00 IST
ಅಕ್ಷರ ಗಾತ್ರ

ಚಂಡೀಗಡ : ಪಂಜಾಬ್‌ನ ಹತ್ತು ಸರ್ಕಾರಿ ಶಾಲೆಗಳನ್ನು ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಹಾಕಿ ಆಟಗಾರರ ಹೆಸರುಗಳಿಂದ ಕರೆಯಲಾಗುತ್ತದೆ. ಆ ರಾಜ್ಯದ ಶಾಲಾ ಶಿಕ್ಷಣ ಸಚಿವ ವಿಜಯ್ ಇಂದರ್ ಸಿಂಗ್ಲಾ ಭಾನುವಾರ ಈ ವಿಷಯ ತಿಳಿಸಿದ್ದಾರೆ.

ಭಾರತ ಹಾಕಿ ತಂಡವು ನಾಲ್ಕು ದಶಕಗಳ ಬಳಿಕ, ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದಿತ್ತು. ಟೋಕಿಯೊ ಕೂಟದಲ್ಲಿ ಕಂಚಿನ ಪದಕ ಒಲಿದಿತ್ತು. ಪಂಜಾಬ್ಅನ್ನು ಪ್ರತಿನಿಧಿಸಿದ ಆಟಗಾರರ ಹೆಸರುಗಳನ್ನು ಶಾಲೆಗಳಿಗೆ ಮರುನಾಮಕರಣ ಮಾಡಲು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಿಂಗ್ಲಾ ತಿಳಿಸಿದ್ದಾರೆ.

ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌, ಉಪನಾಯಕ ಹರ್ಮನ್‌ಪ್ರೀತ್ ಸಿಂಗ್‌, ಮನದೀಪ್‌ ಸಿಂಗ್‌, ಶಂಷೇರ್ ಸಿಂಗ್‌, ರೂಪಿಂದರ್ ಪಾಲ್ ಸಿಂಗ್‌, ಹಾರ್ದಿಕ್ ಸಿಂಗ್‌, ಗುರ್ಜಂತ್ ಸಿಂಗ್‌ ಮತ್ತು ಸಿಮ್ರನ್‌ ಜೀತ್ ಸಿಂಗ್‌ ಅವರ ಹೆಸರುಗಳನ್ನು ಶಾಲೆಗಳಿಗೆ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT