ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಅಥ್ಲೆಟಿಕ್ಸ್‌ ತಂಡದಲ್ಲಿ ಪೂವಮ್ಮ, ವಿಜಯಕುಮಾರಿ

Last Updated 3 ಜುಲೈ 2018, 19:38 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಎಂ.ಆರ್‌.ಪೂವಮ್ಮ ಮತ್ತು ಜಿ.ಕೆ.ವಿಜಯಕುಮಾರಿ ಅವರು ಏಷ್ಯನ್‌ ಕ್ರೀಡಾಕೂಟಕ್ಕೆ ಪ್ರಕಟಿಸಲಾಗಿರುವ ಭಾರತ ಅಥ್ಲೆಟಿಕ್ಸ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಇವರು ಮಹಿಳೆಯರ 4X400 ಮೀಟರ್ಸ್‌ ರಿಲೇ ಸ್ಪರ್ಧೆಯಲ್ಲಿ ಓಡಲಿದ್ದಾರೆ. ಪೂವಮ್ಮ ಅವರು 400 ಮೀಟರ್ಸ್‌ ಮಿಶ್ರ ತಂಡ ವಿಭಾಗದಲ್ಲೂ ಭಾಗವಹಿಸಲಿದ್ದಾರೆ. ಹಿಮಾ ದಾಸ್‌, ಮಹಮ್ಮದ್‌ ಅನಾಸ್‌ ಮತ್ತು ರಾಜೀವ್‌ ಅರೋಕಿಯಾ ಅವರೂ ತಂಡದಲ್ಲಿದ್ದಾರೆ.

ದ್ಯುತಿ ಚಾಂದ್‌ ಅವರು ಮಹಿಳೆಯರ 100 ಮತ್ತು 200 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಜೀವನಿ ಜಾಧವ್‌ ಮತ್ತು ಎಲ್‌.ಸೂರ್ಯ ಅವರು 5000 ಮತ್ತು 10000ಮೀಟರ್ಸ್‌ ಓಟದಲ್ಲಿ ಸ್ಪರ್ಧಿಸಲಿದ್ದಾರೆ. 3000 ಮೀಟರ್ಸ್‌ ಸ್ಟೀಪಲ್‌ಚೇಸ್‌ನಲ್ಲಿ ಸುಧಾ ಸಿಂಗ್‌ ಮತ್ತು ಚಿಂತ ಯಾದವ್‌ ಕಣಕ್ಕಿಳಿಯಲಿದ್ದಾರೆ.

20 ಕಿಲೊ ಮೀಟರ್ಸ್‌ ನಡಿಗೆ ಸ್ಪರ್ಧೆಯಲ್ಲಿ ಬಿ. ಸೌಮ್ಯಾ ಮತ್ತು ಖುಷ್ಬೀರ್‌ ಕೌರ್‌, ಹೆಪ್ಟಥ್ಲಾನ್‌ನಲ್ಲಿ ಸ್ವಪ್ನಾ ಬರ್ಮನ್‌ ಮತ್ತು ಪೂರ್ಣಿಮಾ ಹೆಂಬ್ರಾಮ್‌ ಅವರು ಭಾಗವಹಿಸಲಿದ್ದಾರೆ.

ಪುರುಷರ ವಿಭಾಗದ 200 ಮೀಟರ್ಸ್‌ ಓಟದಲ್ಲಿ ಮಹಮ್ಮದ್‌ ಅನಾಸ್‌, 400 ಮೀ. ಓಟದಲ್ಲಿ ರಾಜೀವ್‌ ಅರೋಕಿಯಾ, 800 ಮೀ. ಓಟದಲ್ಲಿ ಜಿನ್ಸನ್‌ ಜಾನ್ಸನ್‌ ಮತ್ತು ಮಂಜಿತ್‌ ಸಿಂಗ್‌ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT