ಮಂಗಳವಾರ, ಮಾರ್ಚ್ 2, 2021
18 °C

ಥಾಯ್ಲೆಂಡ್ ಓಪನ್‌: ಸಿಂಧು, ಸಮೀರ್ ಕ್ವಾರ್ಟರ್ ಫೈನಲ್‌ಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್: ಭಾರತದ ಪಿ.ವಿ.ಸಿಂಧು ಮತ್ತು ಸಮೀರ್ ವರ್ಮಾ ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇರಿಸಿದರು. ಗುರುವಾರ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಸಿಂಧು ಮಲೇಷ್ಯಾದ ಕಿಸೋನಾ ಸೆಲ್ವಡುರಯ್ ವಿರುದ್ಧ 21–10, 21–12ರಲ್ಲಿ ಗೆಲುವು ಸಾಧಿಸಿದರು. ಎರಡನೇ ಸುತ್ತಿನ ಈ ಹಣಾಹಣಿ ಕೇವಲ 35 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. 

ವಿಶ್ವ ಕ್ರಮಾಂಕದಲ್ಲಿ 31ನೇ ಸ್ಥಾನದಲ್ಲಿರುವ ಸಮೀರ್ ವರ್ಮಾ 17ನೇ ಕ್ರಮಾಂಕದ ಡೆನ್ಮಾರ್ಕ್ ಆಟಗಾರ ರಸ್ಮಸ್ ಗೆಮ್ಕೆ ವಿರುದ್ಧ 21–12, 21–9ರಲ್ಲಿ ಗೆಲುವು ದಾಖಲಿಸಿದರು. ಮೊದಲ ಸುತ್ತಿನಲ್ಲಿ ಮಲೇಷ್ಯಾದ ಆಟಗಾರ ಎಂಟನೇ ಶ್ರೇಯಾಂಕದ ಲೀ ಜಿ ಜಿಯಾ ಎದುರು ಜಯ ಗಳಿಸಿದ್ದ ಸಮೀರ್ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್‌ ಆ್ಯಂಟನ್‌ಸೆನ್ ಎದುರು ಸೆಣಸುವರು. ಆ್ಯಂಡರ್ಸ್‌ ವಾಕ್‌ ಓವರ್‌ ಪಡೆದು ಎಂಟರ ಘಟ್ಟ ಪ್ರವೇಶಿಸಿದ್ದಾರೆ. 

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜರ್ಮನಿಯ ಮಾರ್ಕ್ ಲಂಫುಸ್ ಮತ್ತು ಇಸಬೆಲ್ ಹೆರ್ಟಿಚ್‌ ಜೋಡಿಯನ್ನು 22-20, 14-21, 21-16ರಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಸಾತ್ವಿಕ್‌ ಸಾಯಿರಾಜ್ ಪುರುಷರ ಡಬಲ್ಸ್‌ನಲ್ಲೂ ಅಮೋಘ ಜಯ ಸಾಧಿಸಿದರು. ಚಿರಾಗ್ ಶೆಟ್ಟಿ ಜೊತೆಗೂಡಿ ಆಡುತ್ತಿರುವ ಅವರು ಏಳನೇ ಶ್ರೇಯಾಂಕಿತ ಕೊರಿಯಾ ಆಟಗಾರರಾದ ಚೊಯ್ ಸೊಗ್ಯು ಮತ್ತು ಸಿಯೊ ಸೆಂಗ್ ಜೆ ಅವರನ್ನು 21-18, 23-21ರಲ್ಲಿ ಸೋಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು