ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿ: ನಾಲ್ಕರ ಘಟ್ಟಕ್ಕೆ ಸಿಂಧು

Last Updated 26 ನವೆಂಬರ್ 2021, 12:38 IST
ಅಕ್ಷರ ಗಾತ್ರ

ಬಾಲಿ: ಹಿನ್ನಡೆಯಿಂದ ಪುಟಿದೆದ್ದು ಜಯಭೇರಿ ಮೊಳಗಿಸಿದ ಭಾರತದ ಪಿ.ವಿ.ಸಿಂಧು ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ ತಲುಪಿದ್ದಾರೆ.

ವಿಶ್ವ ಚಾಂಪಿಯನ್‌, ಮೂರನೇ ಶ್ರೇಯಾಂಕದ ಸಿಂಧು ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ 14-21, 21-19, 21-14ರಿಂದ ದಕ್ಷಿಣ ಕೊರಿಯಾದ ಸಿಮ್ ಯೂಜಿನ್ ಅವರನ್ನು ಮಣಿಸಿದರು. ಒಂದು ತಾಸು ಆರು ನಿಮಿಷಗಳ ಆಟದಲ್ಲಿ ಭಾರತದ ಆಟಗಾರ್ತಿ ಜಯ ಒಲಿಸಿಕೊಂಡರು.

ಸಿಂಧೂ ಅವರು ಮುಂದಿನ ಪಂದ್ಯದಲ್ಲಿ ಜಪಾನ್‌ನ ಅಸುಕಾ ತಕಹಾಶಿ ಮತ್ತು ಥಾಯ್ಲೆಂಡ್‌ನ ರಚನೊಕ್ ಇಂತನಾನ್‌ ನಡುವಣ ಕ್ವಾರ್ಟರ್‌ಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಯೂಜಿನ್ ಎದುರಿನ ಸಿಂಧು ಆಡಿದ ಪಂದ್ಯ ಭಾರಿಸವಾಲಿನಿಂದ ಕೂಡಿತ್ತು. ಮೊದಲ ಗೇಮ್‌ನ ಆರಂಭದಲ್ಲಿ ಭಾರತದ ಆಟಗಾರ್ತಿ 7–1ರಿಂದ ಮುನ್ನಡೆ ಸಾಧಿಸಿದ್ದರು. ಸುಲಭ ಜಯದ ನಿರೀಕ್ಷೆಯಲ್ಲಿದ್ದ ಅವರಿಗೆ ಯೂಜಿನ್‌ ತಿರುಗೇಟು ನೀಡಿದರು. ಸತತ ಆರು ಪಾಯಿಂಟ್ಸ್ ಕಲೆಹಾಕಿ ಗೇಮ್ ಸಮಬಲಕ್ಕೆ ತಂದರು. ಒಂದು ಹಂತದಲ್ಲಿ 11–10ರಿಂದ ಮುನ್ನಡೆ ಗಳಿಸಿದ ಜಪಾನ್ ಆಟಗಾರ್ತಿ, ಅದೇ ಲಯದಲ್ಲಿ ಮುನ್ನಡೆದು ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನಲ್ಲಿ ಜಪಾನ್ ಆಟಗಾರ್ತಿ ಪ್ರಬಲ ಪೈಪೋಟಿ ನೀಡಿದರು. ಮೊದಲ ಏಳು ಪಾಯಿಂಟ್ಸ್‌ವರೆಗೆ ಉಭಯ ಆಟಗಾರ್ತಿಯರು ಸಮಬಲದ ಹೋರಾಟ ನಡೆಸಿದರು. ದೀರ್ಘ ರ‍್ಯಾಲಿಗಳು ಕಂಡುಬಂದ ಈ ಗೇಮ್‌ನಲ್ಲಿ ಸಿಂಧು 14–8ರಿಂದ ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಯೂಜಿನ್ ತಿರುಗೇಟು ನೀಡಿದರೂ, ಸಿಂಧು ಅನುಭವದ ಆಟದ ಮುಂದೆ ತಲೆಬಾಗಿದರು.

ಮೂರನೇ ಮತ್ತು ನಿರ್ಣಾಯಕ ಗೇಮ್‌ ಆರಂಭದಲ್ಲಿ ಸಿಂಧು 11–4ರ ಮುನ್ನಡೆ ಸಾಧಿಸಿದರು. ಚೇತರಿಸಿಕೊಂಡ ಜಪಾನ್ ಆಟಗಾರ್ತಿ 11–11ರ ಸಮಬಲ ಸಾಧಿಸಿದರು. ಆದರೆ ಬಳಿಕ ಸಿಂಧು ಉತ್ತಮ ಸರ್ವ್‌ಗಳ ಮೂಲಕ ಗೇಮ್ ಮತ್ತು ಪಂದ್ಯ ಕೈವಶ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT