ಸೋಮವಾರ, ನವೆಂಬರ್ 30, 2020
26 °C
ಎಟಿಪಿ ಫೈನಲ್ಸ್: ಆ್ಯಂಡ್ರೆ ರುಬ್ಲೆವ್‌ಗೆ ಸೋತ ಡಾಮಿನಿಕ್‌ ಥೀಮ್‌

ಎಟಿಪಿ ಫೈನಲ್ಸ್: ಸೆಮಿಫೈನಲ್‌ಗೆ ರಫೆಲ್‌ ನಡಾಲ್

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ರಫೆಲ್‌ ನಡಾಲ್‌ ಅವರು ಎಟಿಪಿ ಫೈನಲ್ಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಐದು ವರ್ಷಗಳಲ್ಲಿ ಮೊದಲ ಬಾರಿ ಟೂರ್ನಿಯ ನಾಲ್ಕರ ಘಟ್ಟ ತಲುಪಿರುವ ಅವರು, ಈ ಹಾದಿಯಲ್ಲಿ ಹಾಲಿ ಚಾಂಪಿಯನ್‌ ಸ್ಟೆಫನೋಸ್ ಸಿಸಿಪಸ್‌ ಅವರನ್ನು ಸೋಲಿಸಿದರು. ಇಲ್ಲಿಯ ಓ2 ಅರೆನಾದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 6–4, 4–6, 6–2ರ ಜಯ ಅವರಿಗೆ ಒಲಿಯಿತು.

ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಸ್ಪೇನ್ ಆಟಗಾರ ನಡಾಲ್‌ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಅವರಿಗೆ ಜಯದ ಉತ್ತಮ ಅವಕಾಶ ಒದಗಿಬಂದಿದೆ.

ಹೋದ ವರ್ಷದ ಟೂರ್ನಿಯಲ್ಲಿ ಮೊದಲ ಬಾರಿ ಟ್ರೋಫಿಗೆ ಮುತ್ತಿಕ್ಕಿದ್ದ ಗ್ರೀಕ್‌ ಆಟಗಾರ ಸಿಸಿಪಸ್‌, ಈ ಬಾರಿ ಗುಂಪುಹಂತದ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ನಡಾಲ್ ಅವರು ಮೂರು ಬಾರಿ ಸಿಸಿಪಸ್ ಅವರ ಸರ್ವ್‌ ಮುರಿದರು.

ಸಿಸಿಪಸ್‌ ಎದುರು 6–1 ಗೆಲುವಿನ ದಾಖಲೆ ಹೊಂದಿರುವ ನಡಾಲ್‌, ಶನಿವಾರ ನಡೆಯುವ ಸೆಮಿಫೈನಲ್‌ ಹಣಾಹಣಿಯಲ್ಲಿ ಡೇನಿಯಲ್‌ ಮೆಡ್ವೆಡೆವ್‌ ಅವರನ್ನು ಎದುರಿಸಲಿದ್ದಾರೆ.

ಗುರುವಾರ ನಡೆದ ಮತ್ತೊಂದು ಪಂದ್ಯದಲ್ಲಿ, ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಆ್ಯಂಡ್ರೆ ರುಬ್ಲೆವ್‌ 6–2, 7–5ರಿಂದ ಅಮೆರಿಕ ಓಪನ್‌ ಚಾಂಪಿಯನ್‌ ಡಾಮಿನಿಕ್‌ ಥೀಮ್‌ ಅವರನ್ನು ಪರಾಭವಗೊಳಿಸಿದರು. ಆದರೆ ಈಗಾಗಲೇ ಸಿಸಿಪಸ್‌ ಹಾಗೂ ನಡಾಲ್‌ ಅವರಿಗೆ ಸೋಲುಣಿಸಿರುವ ಥೀಮ್‌ ಗುಂಪುಹಂತದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಮುಂದಿನ ಪಂದ್ಯದಲ್ಲಿ ಥೀಮ್‌ ಅವರು, ನೊವಾಕ್‌ ಜೊಕೊವಿಚ್‌ ಹಾಗೂ ಅಲೆಕ್ಸಾಂಡರ್‌ ಜ್ವೆರೆವ್ ನಡುವೆ ನಡೆಯುವ ಪಂದ್ಯದ ವಿಜೇತರಿಗೆ ಮುಖಾಮುಖಿಯಾಗಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು