ಸೋಮವಾರ, ಡಿಸೆಂಬರ್ 9, 2019
20 °C
ಶೂಟಿಂಗ್‌: ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ಸಾಧನೆ

ರಾಜೇಶ್ವರಿ ರಾಷ್ಟ್ರೀಯ ದಾಖಲೆ

Published:
Updated:

ನವದೆಹಲಿ: ಉತ್ತಮ ಸಾಮರ್ಥ್ಯ ತೋರಿದ ಪಂಜಾಬ್‌ನ ರಾಜೇಶ್ವರಿ ಕುಮಾರಿ, ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಾಟ್‌ಗನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಮಹಿಳೆಯರ ಟ್ರ್ಯಾಪ್‌ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ.

ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಮಂಗಳವಾರ ಇದನ್ನು ಖಚಿತಪಡಿಸಿದೆ.

ಅರ್ಹತಾ ಸುತ್ತಿನಲ್ಲಿ ಒಟ್ಟು 118 ಸ್ಕೋರ್‌ ಕಲೆಹಾಕಿದ ರಾಜೇಶ್ವರಿ ಅವರು ಸೀಮಾ ತೋಮರ್‌, ಶ್ರೇಯಸಿ ಸಿಂಗ್‌ ಹಾಗೂ ಮನೀಷಾ ಕೀರ್‌ ಅವರ ಹೆಸರಿನಲ್ಲಿದ್ದ (ಎಲ್ಲರದ್ದೂ 116 ಸ್ಕೋರ್‌) ದಾಖಲೆ ಅಳಿಸಿ ಹಾಕಿದರು. ಶಗುನ್‌ ಚೌಧರಿ ಕೂಡ 117 ಸ್ಕೋರ್‌ ಕಲೆಹಾಕಿ ದಾಖಲೆ ಮೀರಿ ನಿಂತಿದ್ದರು.

‘ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಆಗಲಿಲ್ಲ. ಆದರೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರಿಂದ ಅತೀವ ಖುಷಿಯಾಗಿದೆ. ಸೀಮಾ, ಶ್ರೇಯಸಿ ಹಾಗೂ ಮನೀಷಾ ಅವರಂತಹ ದಿಗ್ಗಜರ ಸಾಧನೆ ಮೀರಿ ನಿಂತಿದ್ದರಿಂದ ಸಂತಸ ಇಮ್ಮಡಿಸಿದೆ’ ಎಂದು ರಾಜೇಶ್ವರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)