ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಸ್‌ಐ ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು

ರಕ್ಷಣೆ ಪಡೆಯಲ್ಲಿ ಕಾರ್ಯನಿರ್ವಹಿಸುವ ಒಲಿಂಪಿಯನ್ನರನ್ನು ಸನ್ಮಾನಿಸಿದ ಸಚಿವ ರಾಜನಾಥ್ ಸಿಂಗ್
Last Updated 27 ಆಗಸ್ಟ್ 2021, 14:35 IST
ಅಕ್ಷರ ಗಾತ್ರ

ಪುಣೆ:ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ, ದೇಶದ ರಕ್ಷಣಾ ಪಡೆಗಳಲ್ಲಿ ಕಾರ್ಯನಿರ್ವಹಿಸುವ ಕ್ರೀಡಾಪಟುಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಇಲ್ಲಿಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ (ಎಎಸ್‌ಐ) ಸನ್ಮಾನಿಸಿದರು.

ಇದೇ ವೇಳೆ ಎಎಸ್‌ಐ ಕ್ರೀಡಾಂಗಣಕ್ಕೆ ಟೋಕಿಯೋ ಕೂಟದ ಜಾವೆಲಿನ್ ಥ್ರೊ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಅವರ ಹೆಸರಿನಿಂದ ಮರುನಾಮಕರಣ ಮಾಡಲಾಯಿತು.

ಸಮಾರಂಭದಲ್ಲಿ ನೀರಜ್‌, ತರುಣದೀಪ್ ರಾಯ್‌, ಪ್ರವೀಣ್ ಜಾಧವ್‌ (ಇಬ್ಬರೂ ಆರ್ಚರಿಪಟುಗಳು), ಅಮಿತ್, ಮನೀಷ್ ಕೌಶಿಕ್‌, ಸತೀಶ್ ಕುಮಾರ್‌ (ಮೂವರು ಬಾಕ್ಸರ್‌ಗಳು), ಸಿ.ಎ.ಕುಟ್ಟಪ್ಪ (ಬಾಕ್ಸಿಂಗ್ ಕೋಚ್‌), ಚೋಟೆಲಾಲ್ ಯಾದವ್‌ (ಬಾಕ್ಸರ್‌ ಮೇರಿ ಕೋಮ್‌ ಅವರ ಕೋಚ್‌), ದೀಪಕ್ ಪೂನಿಯಾ (ಕುಸ್ತಿಪಟು), ಅರ್ಜುನ್ ಲಾಲ್ ಜಾಟ್‌ ಮತ್ತು ಅರವಿಂದ್ ಸಿಂಗ್‌ (ರೋಯಿಂಗ್ ಪಟುಗಳು), ವಿಷ್ಣು ಸರವಣನ್‌ (ಸೇಲರ್‌) ಅವರನ್ನು ಸನ್ಮಾನಿಸಲಾಯಿತು.

ನೀರಜ್ ಅವರಿಗೆ ರಾಜನಾಥ್‌ ಸಿಂಗ್‌ ಇದೇ ವೇಳೆ ಜಾವೆಲಿನ್ ಮಾದರಿಯನ್ನು ಕಾಣಿಕೆಯಾಗಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT