ರ‍್ಯಾಲಿ: 32ನೇ ಸ್ಥಾನದಲ್ಲಿ ಅರವಿಂದ್‌

ಶುಕ್ರವಾರ, ಏಪ್ರಿಲ್ 26, 2019
36 °C

ರ‍್ಯಾಲಿ: 32ನೇ ಸ್ಥಾನದಲ್ಲಿ ಅರವಿಂದ್‌

Published:
Updated:
Prajavani

ಎರ್‌ಫೌಡ್‌, ಮೊರೊಕ್ಕೊ: ಕರ್ನಾಟಕದ ಕೆ.ಪಿ. ಅರವಿಂದ್‌ ಇಲ್ಲಿ ಆಯೋಜನೆಯಾಗಿರುವ ಮೆರ್ಜೊಗ ಮೋಟಾರು ರ‍್ಯಾಲಿಯ ಮೂರನೇ ಹಂತದಲ್ಲಿ 32ನೇ ಸ್ಥಾನ ಗಳಿಸಿದ್ದಾರೆ.

ಗುರುವಾರ ನಡೆದ 229 ಕಿಲೊ ಮೀಟರ್ಸ್‌ಗಳ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಉಡುಪಿಯ ಅರವಿಂದ್‌ ಅಮೋಘ ಚಾಲನಾ ಕೌಶಲ ಮೆರೆದರು. ಶೆರ್ಕೊ ಟಿವಿಎಸ್‌ ರ‍್ಯಾಲಿ ಫ್ಯಾಕ್ಟರಿ ತಂಡವನ್ನು ಪ್ರತಿನಿಧಿಸಿರುವ ಅವರು ಒಟ್ಟಾರೆ 62ನೇ ಸ್ಥಾನದಲ್ಲಿದ್ದಾರೆ.

ಎಂಡ್ಯೂರೊ ವಿಭಾಗದಲ್ಲಿ ಕಣದಲ್ಲಿರುವ ಕರ್ನಾಟಕದ ಮತ್ತೊಬ್ಬ ಚಾಲಕ ಅಬ್ದುಲ್‌ ವಾಹಿದ್‌ ತನ್ವೀರ್‌, ಮೂರನೇ ಹಂತದ ಸ್ಪರ್ಧೆಯನ್ನು ಎರಡನೇಯವರಾಗಿ ಮುಗಿಸಿದರು. ಅವರು ಒಟ್ಟಾರೆ ಮೂರನೇ ಸ್ಥಾನ ಪಡೆದಿದ್ದಾರೆ.

ಈ ತಂಡದ ಮೈಕಲ್‌ ಮೆಟ್ಗೆ, ತಾಂತ್ರಿಕ ಕಾರಣಗಳಿಂದಾಗಿ ರ‍್ಯಾಲಿಯಿಂದ ಹೊರ ಬಿದ್ದಿದ್ದಾರೆ.

ಹೀರೊ ಮೋಟೊ ಸ್ಪೋರ್ಟ್ಸ್‌ ತಂಡದ ಜಾವೊಕಿಮ್‌ ರಾಡ್ರಿಗಸ್‌ ಮತ್ತು ಒರಿಯಲ್‌ ಮೆನಾ ಅಮೋಘ ಸಾಮರ್ಥ್ಯ ತೋರಿದ್ದಾರೆ. ಇವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳೊಂದಿಗೆ ಮೂರನೇ ಹಂತದ ಸ್ಪರ್ಧೆ ಪೂರ್ಣಗೊಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !