ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಲೀಗ್ ಹಾಕಿ: ಭಾರತಕ್ಕೆ ಭರ್ಜರಿ ಗೆಲುವು

Last Updated 4 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಭುವನೇಶ್ವರ: ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಕಾರ್ತಿ ಸೆಲ್ವಂ ಅವರ ಮಿಂಚಿನ ಆಟದ ನೆರವಿನಿಂದ ಭಾರತ ತಂಡ ಎಫ್‌ಐಎಚ್‌ ಪ್ರೊ ಹಾಕಿ ಲೀಗ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು 7–4 ಗೋಲುಗಳಿಂದ ಮಣಿಸಿತು.

ಶುಕ್ರವಾರ ನಡೆದ ಪಂದ್ಯದಲ್ಲಿ 1–3 ಗೋಲುಗಳಿಂದ ಹಿನ್ನಡೆಯಲ್ಲಿದ್ದ ಭಾರತ, ಆ ಬಳಿಕ ಮರುಹೋರಾಟ ನಡೆಸಿತು.

ಹರ್ಮನ್‌ಪ್ರೀತ್‌ ಸಿಂಗ್‌ (7 ಮತ್ತು 19ನೇ ನಿ.) ಹಾಗೂ ಕಾರ್ತಿ ಸೆಲ್ವಂ (17 ಮತ್ತು 38ನೇ ನಿ.) ತಲಾ ಎರಡು ಗೋಲುಗಳನ್ನು ಗಳಿಸಿದರು. ಹರ್ಮನ್‌ ಎರಡೂ ಗೋಲುಗಳನ್ನು ಪೆನಾಲ್ಟಿ ಅವಕಾಶದಲ್ಲಿ ತಂದಿತ್ತರು.

ಭಾರತದ ಇತರ ಗೋಲುಗಳನ್ನು ರಾಜ್‌ಕುಮಾರ್‌ ಪಾಲ್ (31), ಸುಖ್‌ಜೀತ್‌ ಸಿಂಗ್‌ (50) ಮತ್ತು ಜುಗ್ರಾಜ್‌ ಸಿಂಗ್‌ (53) ಅವರು ಗಳಿಸಿದರು.

ನ್ಯೂಜಿಲೆಂಡ್ ತಂಡದ ಪರ ಸೈಮನ್‌ ಚೈಲ್ಡ್‌ (2), ಸ್ಯಾಮ್‌ ಲೇನ್‌ (9), ಜೇಕ್ ಸ್ಮಿತ್‌ (14) ಹಾಗೂ ನಿಕ್‌ ವುಡ್ಸ್‌ (54) ಅವರು ಚೆಂಡನ್ನು ಗುರಿ ಸೇರಿಸಿದರು.

ಪಂದ್ಯದಲ್ಲಿ ಭಾರತಕ್ಕೆ ಒಟ್ಟು 11 ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದ್ದವು. ಅದರಲ್ಲಿ ಮೂರರಲ್ಲಿ ಮಾತ್ರ ಗೋಲು ಬಂದವು.

ಭಾರತ ತನ್ನ ಮುಂದಿನ ಪಂದ್ಯದಲ್ಲಿ ಭಾನುವಾರ, ಸ್ಪೇನ್ ವಿರುದ್ಧ ಆಡಲಿದೆ. ಆತಿಥೇಯರು ಮೊದಲ ಲೆಗ್‌ನಲ್ಲಿ ಸ್ಪೇನ್‌ ಕೈಯಲ್ಲಿ 2–3 ರಿಂದ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT