ಕೊರಿಯಾ ವಿರುದ್ಧ ಗೆಲುವಿನ ಭರವಸೆ

ಸೋಮವಾರ, ಜೂನ್ 17, 2019
28 °C

ಕೊರಿಯಾ ವಿರುದ್ಧ ಗೆಲುವಿನ ಭರವಸೆ

Published:
Updated:
Prajavani

ಬೆಂಗಳೂರು: ಜಿಂಚುನ್‌ನಲ್ಲಿ ಸೋಮವಾರ ಆರಂಭವಾಗಲಿರುವ ಕೊರಿಯಾ ಎದುರಿನ ಮೂರು ಪಂದ್ಯಗಳ ಹಾಕಿ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆ ಇದೆ ಎಂದು ಭಾರತ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಹೇಳಿದರು.

ಭಾರತ ತಂಡ ಶನಿವಾರ ಬೆಳಿಗ್ಗೆ ಕೊರಿಯಾಗೆ ಪ್ರಯಾಣ ಬೆಳೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಣಿ ಈ ಸರಣಿಯು ಹಿರೋಶಿಮಾದಲ್ಲಿ ನಡೆಯಲಿರುವ ಮಹಿಳೆಯರ ಎಫ್‌ಐಎಚ್‌ ವಿಶ್ವ ಸರಣಿಗೆ ಅಭ್ಯಾಸ ನಡೆಸಲು ಉತ್ತಮ ಅವಕಾಶ ಒದಗಿಸಲಿದೆ ಎಂದರು. 

ಭುಜದ ನೋವಿನಿಂದಾಗಿ ರಾಣಿ ರಾಂಪಾಲ್ ಅವರು ಮಲೇಷ್ಯಾ ಸರಣಿಯಲ್ಲಿ ಆಡಿರಲಿಲ್ಲ. ಪಕ್ಕೆಲುಬು ನೋವಿನಿಂದ ಬಳಲುತ್ತಿದ್ದ ಡ್ರ್ಯಾಗ್ ಫ್ಲಿಕ್ ಪರಿಣಿತೆ ಗುರ್ಜೀತ್‌ ಕೌರ್ ಕೂಡ ಆ ಸರಣಿಯಲ್ಲಿ ಕಣಕ್ಕೆ ಇಳಿದಿರಲಿಲ್ಲ.

‘ನೋವಿಗೆ ಚಿಕತ್ಸೆ ಪಡೆದು ಬಂದಿರುವ ಗುರ್ಜೀತ್ ಮತ್ತು ನನಗೆ ಈ ಸರಣಿಯು ಅತ್ಯಂತ್ ಮಹತ್ವದ್ದು. ಬಲಿಷ್ಠ ತಂಡವೊಂದರ ವಿರುದ್ಧ ಆಡಲು ಲಭಿಸಿರುವ ಅವಕಾಶ ಎಫ್ಐಎಚ್‌ ಸರಣಿಯ ಫೈನಲ್ಸ್‌ಗೆ ಸಹಕಾರಿಯಾಗಲಿದೆ’ ಎಂದು ರಾಣಿ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !