ಭಾನುವಾರ, ಡಿಸೆಂಬರ್ 15, 2019
26 °C

ಐಎಸ್‌ಎಸ್‌ಎಫ್‌ ಉಪಾಧ್ಯಕ್ಷರಾಗಿ ರಣಿಂದರ್‌ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಭಾರತದ ರಣಿಂದರ್‌ ಸಿಂಗ್‌, ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್‌ ಫೆಡರೇಶನ್‌ನ (ಐಎಸ್‌ಎಸ್‌ಎಫ್‌) ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯರೆನಿಸಿಕೊಂಡಿದ್ದಾರೆ. 

51 ವರ್ಷ ವಯಸ್ಸಿನ ರಣಿಂದರ್‌, ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಮುಖ್ಯಸ್ಥರಾಗಿದ್ದಾರೆ. 

ಶುಕ್ರವಾರ, ಜರ್ಮನಿಯ ಮ್ಯೂನಿಚ್‌ನಲ್ಲಿ ಸಾಮಾನ್ಯ ಸಭೆಯ ಚುನಾವಣೆ ನಡೆಯಿತು. 161 ಮತಗಳಿಸಿದ ರಣಿಂದರ್‌, ನಾಲ್ಕು ಮಂದಿ ಉಪಾಧ್ಯಕ್ಷ ಸ್ಥಾನದಲ್ಲಿ ಒಬ್ಬರಾಗಿ ಆಯ್ಕೆಗೊಂಡರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು