ಶನಿವಾರ, ನವೆಂಬರ್ 23, 2019
17 °C

ರವಿಕುಮಾರ್‌ ಮೇಲೆ ನಾಲ್ಕು ವರ್ಷ ನಿಷೇಧ

Published:
Updated:
Prajavani

ನವದೆಹಲಿ: ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಭಾರತದ ವೇಟ್‌ಲಿಫ್ಟರ್‌ ರವಿಕುಮಾರ್‌ ಕಟುಲು ಅವರ ಮೇಲೆ ನಾಲ್ಕು ವರ್ಷ ನಿಷೇಧ ಹೇರಲಾಗಿದೆ.

31 ವರ್ಷ ವಯಸ್ಸಿನ ರವಿಕುಮಾರ್‌ ಅವರು 2010ರ ಕಾಮನ್‌ವೆಲ್ತ್‌ ಕ್ರೀಡಾಕೂಟದ 69 ಕೆ.ಜಿ.ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. 2014ರ ಕೂಟದಲ್ಲಿ 77 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದರು.

ರವಿಕುಮಾರ್ ಅವರ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ ನಿಷೇಧಿತ ಒಸ್ಟಾರಿನ್‌ ಮದ್ದಿನ ಅಂಶ ಪತ್ತೆಯಾಗಿದೆ.

ಸ್ನಾಯುಗಳ ಬಲವರ್ಧನೆಗೆ ಸಹಕಾರಿಯಾಗುವ ಈ ಮದ್ದಿನ ಬಳಕೆಗೆ ಯಾವ ದೇಶದಲ್ಲೂ ಅನುಮತಿ ಇಲ್ಲ. ಕೆಲ ಅಥ್ಲೀಟ್‌ಗಳು ಇದನ್ನು ಕಾಳ ಸಂತೆಯಲ್ಲಿ ಖರೀದಿಸುತ್ತಿದ್ದಾರೆ ಎಂದು ಹೇಳಲಾಗಿದೆ.

‘ರವಿ ಅವರು ಉದ್ದೀಪನಾ ಮದ್ದು ಸೇವಿಸಿದ್ದು ಪರೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ ನಾಲ್ಕು ವರ್ಷ ನಿಷೇಧ ಹೇರಲಾಗಿದೆ’ ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕದ (ನಾಡಾ) ಮಹಾ ನಿರ್ದೇಶಕ ನವೀನ್‌ ಅಗರವಾಲ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)