ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಬಾಕ್ಸಿಂಗ್: ಕ್ವಾರ್ಟರ್ ಫೈನಲ್‌ಗೆ ಪೂಜಾ ರಾಣಿ

ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ನೀತು, ಅಂಕುಶಿತಾಗೂ ಗೆಲುವು
Last Updated 24 ಅಕ್ಟೋಬರ್ 2021, 20:26 IST
ಅಕ್ಷರ ಗಾತ್ರ

ಹಿಸ್ಸಾರ್‌: ಹರಿಯಾಣದ ಪೂಜಾ ರಾಣಿ ಅವರು ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 81 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಹಾಲಿ ಏಷ್ಯನ್ ಚಾಂಪಿಯನ್ ಪೂಜಾ ಅವರು ಭಾನುವಾರ ನಡೆದ ಬೌಟ್‌ನಲ್ಲಿ ಕೇರಳದ ಪಾರ್ವತಿ ಪಿ ಅವರನ್ನು ಮಣಿಸಿದರು.

ಸೇಂಟ್ ಜೋಸೆಫ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಆರಂಭದಿಂದಲೇ ರಾಣಿ ಆಧಿಪತ್ಯ ಸ್ಥಾಪಿಸಿದರು. ಸ್ಪರ್ಧೆ ಮುಂದೆ ಸಾಗಿದಂತೆ ಪೂಜಾ ಅವರ ಪ್ರಬಲ ಪಂಚ್‌ಗಳು ಪಾರ್ವತಿ ಅವರನ್ನು ಕಂಗೆಡಿಸಿದವು. ಹೀಗಾಗಿ ಮೊದಲ ಸುತ್ತಿನ ಅಂತ್ಯಕ್ಕೇ ಬೌಟ್ ಕೊನೆಗೊಳಿಸಲು ರೆಫರಿಗಳು ನಿರ್ಧರಿಸಿದರು.

ಯೂತ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲಿಗರಾಗಿದ್ದ ಹರಿಯಾಣದ ನೀತು ಮತ್ತು ಅಸ್ಸಾಂನ ಅಂಕುಶಿತಾ ಬೋರೊ ಅವರು ಗೆಲುವಿನ ಓಟ ಮುಂದುವರಿಸಿದರು. ನೀತು 48 ಕೆಜಿ ವಿಭಾಗದಲ್ಲಿ ಮತ್ತು ಅಂಕುಶಿತಾ 66 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಪಶ್ಚಿಮ ಬಂಗಾಳದ ಪೂರಬಿ ಕರ್ಮಾಕರ್ ಅವರನ್ನು ನೀತು 5–0ಯಿಂದ ಮಣಿಸಿದರು. ಪಂಜಾಬ್‌ನ ಅಮನ್‌ದೀಪ್ ಕೌರ್ ವಿರುದ್ಧ ಅಂಕುಶಿತಾ ಪ್ರಬಲ ಆಕ್ರಮಣದ ಮೂಲಕ ಮಣಿಸಿದರು.

48 ಕೆಜಿ ವಿಭಾಗದಲ್ಲಿ ರೈಲ್ವೆ ಸ್ಪೋರ್ಟ್ಸ್ ಪ್ರಮೋಷಬ್ ಬೋರ್ಡ್‌ನ ಮಂಜು ರಾಣಿ ಉತ್ತರಾಖಂಡದ ಶೋಭಾ ಕಹಲಿ ಅವರನ್ನು 5–0ಯಿಂದ ಸೋಲಿಸಿ ಎಂಟರ ಘಟ್ಟ ಪ್ರವೇಶಿಸಿದರು. ಮಂಜು ರಾಣಿ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ತಮಿಳುನಾಡಿದ ಕಲೈವಾಣಿ ಗುಜರಾತ್‌ನ ಶೀತಲ್ ದಾತಾನಿಯ ಅವರನ್ನು ಸೋಲಿಸಿದರು.

66 ಕೆಜಿ ವಿಭಾಗದಲ್ಲಿ ಪೊಲೀಸ್ ಇಲಾಖೆಯ ಲಾಲ್‌ಬೂಟಾಸಾಹಿ 5–0ಯಿಂದ ಹರಿಯಾಣದ ಜ್ಯೋತಿ ರಾಣಿ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು. 63 ಕೆಜಿ ವಿಭಾಗದಲ್ಲಿ ಹರಿಯಾಣದ ಪರ್ವೀನ್ ‍ಪೊಲೀಸ್ ಇಲಾಖೆಯ ಚೋಬಾ ದೇವಿ ಹೇಮಮ್ ಅವರನ್ನು 4–1ರಲ್ಲಿ ಸೋಲಿಸಿದರು. ಮಧ್ಯಪ್ರದೇಶದ ಮಂಜು ಬಂಬೋರಿಯ ಮಿಜೋರಾಂನ ಅಭಿಸಕ್ ವನ್‌ಲಾಲ್‌ಮಾವಿ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT