ಪೋಲ್‌ವಾಲ್ಟ್‌: ಮಿಂಚು ಹರಿಸಿದ ರೆನಾಡ್‌

6

ಪೋಲ್‌ವಾಲ್ಟ್‌: ಮಿಂಚು ಹರಿಸಿದ ರೆನಾಡ್‌

Published:
Updated:

ಬರ್ಲಿನ್‌ : ವಿಶ್ವ ದಾಖಲೆಯ ಒಡೆಯ ರನಾಡ್‌ ಲಾವಿಲೀನ್‌ ಅವರು ಯುರೋಪಿಯನ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಪೋಲ್‌ವಾಲ್ಟ್‌ನಲ್ಲಿ ಶುಕ್ರವಾರ ಮಿಂಚು ಹರಿಸಿದರು. ಎರಡೇ ಪ್ರಯತ್ನಗಳಲ್ಲಿ ಯಶಸ್ಸು ಕಂಡ ಅವರು ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಲಗ್ಗೆ ಇರಿಸಿದರು.

ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಫ್ರಾನ್ಸ್‌ನ ಈ ಅಥ್ಲೀಟ್‌ 2012ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಳೆದ ಬಾರಿ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಶುಕ್ರವಾರ ಮೊದಲ ಪ್ರಯತ್ನದಲ್ಲಿ 5.51 ಮೀಟರ್‌ ಎತ್ತರದ ಸಾಧನೆ ಮಾಡಿದ ಅವರು ನಂತರ 5.61 ಮೀಟರ್‌ ಎತ್ತರಕ್ಕೆ ಜಿಗಿದರು.

ಫೈನಲ್‌ನಲ್ಲಿ ಅವರು ಸ್ವೀಡನ್‌ನ ಅರ್ಮಾಂಡ್ ಡುಪ್ಲಾಂಟಿಸ್‌, ಪೋಲೆಂಡ್‌ನ ಪವೆಲ್‌ ವೋಸಿಚಾಸ್ಕಿ ಮತ್ತು ಪೀಟರ್‌ ಲೈಸೆಕ್‌, ರಷ್ಯಾದ ತಿಮುರ್‌ ಮಾರ್ಗನೊವ್‌ ಅವರ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿದೆ.

ಹೆಪ್ಟಾಥ್ಲಾನ್‌ನಲ್ಲಿ ಬೆಲ್ಜಿಯಂನ ನಫಿಸಾಟೊ ಥಿಯಾಮ್‌ ಅವರಿಗೆ ಬ್ರಿಟನ್‌ನ ಕ್ಯಾಥರಿನಾ ಜಾನ್ಸನ್ ಥಾಮ್ಸನ್‌ ಪ್ರಬಲ ಪೈಪೋಟಿ ನೀಡಿದ್ದಾರೆ. ಗುರುವಾರ 200 ಮೀಟರ್ಸ್ ಓಟದ ಗುರಿಯನ್ನು 22.88 ಸೆಕೆಂಡ್‌ನಲ್ಲಿ ದಾಟಿದ ಅವರು ಶುಕ್ರವಾರ ಲಾಂಗ್‌ಜಂಪ್‌ನಲ್ಲಿ 6.68 ಮೀಟರ್‌ ದೂರದ ಸಾಧನೆ ಮಾಡಿದರು. ಈ ಮೂಲಕ 113 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. ಸ್ಪರ್ಧೆಯ 800 ಮೀಟರ್ಸ್ ಓಟ ಶನಿವಾರ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !