ಆರ್‌ಎಫ್‌ಸಿ ರ‍್ಯಾಲಿಯಲ್ಲಿ ಬೆಂಗಳೂರಿನ ಶ್ರುತಿ ಕಣಕ್ಕೆ

7

ಆರ್‌ಎಫ್‌ಸಿ ರ‍್ಯಾಲಿಯಲ್ಲಿ ಬೆಂಗಳೂರಿನ ಶ್ರುತಿ ಕಣಕ್ಕೆ

Published:
Updated:
ಸಾರಾ ಫ್ಯಾನಿಂಗ್ (ಎಡ) ಮತ್ತು ಶ್ರುತಿ ರಂಜನ್‌ ಪೈ

ಬೆಂಗಳೂರು: ಮಣಿಪಾಲ್‌ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ನಿರ್ದೇಶಕಿ ಶ್ರುತಿ ರಂಜನ್‌ ಪೈ ಅವರು ಪ್ರತಿಷ್ಠಿತ ರೇನ್‌ಫಾರೆಸ್ಟ್‌  ಚಾಲೆಂಜ್‌ (ಆರ್‌ಎಫ್‌ಸಿ) ಮೋಟರ್‌ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಶೃತಿ ಮತ್ತು ಸಹ ಚಾಲಕಿ ಸಾರಾ ಫ್ಯಾನಿಂಗ್‌ ಅವರು ಈ ರ‍್ಯಾಲಿಯಲ್ಲಿ ‘ಸಿಂಪ್ಲಿ ಸೇಜ್‌’ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಐದನೇ ಆವೃತ್ತಿಯ ಆರ್‌ಎಫ್‌ಸಿ ಇಂಡಿಯಾ ಆಫ್‌ ರೋಡ್‌ ರ‍್ಯಾಲಿಯು ಜುಲೈ 21ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿದೆ.

ಕಾಗರ್‌ ಮೋಟರ್‌ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಆಶ್ರಯದಲ್ಲಿ ನಡೆಯುತ್ತಿರುವ ಈ ರ‍್ಯಾಲಿಯಲ್ಲಿ ಒಟ್ಟು 41 ತಂಡಗಳು ಭಾಗವಹಿಸಲಿವೆ.

ಅತ್ಯಂತ ಅಪಾಯಕಾರಿ ಮತ್ತು ಕಠಿಣ ಎನಿಸಿರುವ ಈ ರ‍್ಯಾಲಿ ಒಟ್ಟು 26 ವಿಶೇಷ ಹಂತಗಳಲ್ಲಿ ನಡೆಯಲಿದೆ‌. ಅತಿ ಹೆಚ್ಚು ಪಾಯಿಂಟ್‌ ಗಳಿಸುವ ತಂಡ ಟ್ರೋಫಿಯ ಜೊತೆಗೆ ಸುಮಾರು ₹ 7 ಲಕ್ಷ ಬಹುಮಾನ ಜೇಬಿಗಿಳಿಸಿಕೊಳ್ಳ ಲಿದೆ. ಜೊತೆಗೆ ಈ ವರ್ಷದ ಅಂತ್ಯದಲ್ಲಿ ಮಲೇಷ್ಯಾದಲ್ಲಿ ಆಯೋಜನೆಯಾಗಿರುವ ಆರ್‌ಎಫ್‌ಸಿ ಮದರ್‌ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದೆ.

‘ಆರ್‌ಎಫ್‌ಸಿ ಇಂಡಿಯಾ, ಭಾರತದ ಅಪಾಯಕಾರಿ ಆಫ್‌ರೋಡ್‌ ರ‍್ಯಾಲಿಗಳಲ್ಲಿ ಒಂದಾಗಿದೆ. ಇದರಲ್ಲಿ ನಾನು ಮತ್ತು ಸಾರಾ ಉತ್ತಮ ಸಾಮರ್ಥ್ಯ ತೋರುತ್ತೇವೆ’ ಎಂದು 38ರ ಹರೆಯದ ಶ್ರುತಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !