ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಧಿಮಾ, ಸುವನಾ ಕೂಟ ದಾಖಲೆ

ರಾಜ್ಯ ಈಜು ಕೂಟ: ಎರಡು ಕೂಟ ದಾಖಲೆ ಬರೆದ ಡಾಲ್ಫಿನ್ ಅಕ್ವಾಟಿಕ್ಸ್‌; ಬಿಎಸಿಗೆ ಒಂದು ದಾಖಲೆ
Last Updated 8 ಮಾರ್ಚ್ 2021, 4:18 IST
ಅಕ್ಷರ ಗಾತ್ರ

ಬೆಂಗಳೂರು: ಡಾಲ್ಫಿನ್ ಅಕ್ವಾಟಿಕ್ಸ್‌ನ ಸುವನಾ ಸಿ.ಭಾಸ್ಕರ್ ಮತ್ತು ಬಸವನಗುಡಿ ಈಜುಕೇಂದ್ರದ (ಬಿಎಸಿ) ರಿಧಿಮಾ ವಿ.ಕುಮಾರ್, ರಾಜ್ಯ ಈಜುಕೂಟದಲ್ಲಿ ಭಾನುವಾರ ಕೂಟ ದಾಖಲೆ ನಿರ್ಮಿಸಿದರು. ರಾಜ್ಯ ಈಜು ಸಂಸ್ಥೆಯು ಡಾಲ್ಫಿನ್ ಅಕ್ವಾಟಿಕ್ಸ್, ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ಆಯೋಜಿಸಿದ್ದ ಕೂಟದ ಮಹಿಳೆಯರ ಮೆಡ್ಲೆಯಲ್ಲಿ ಡಾಲ್ಫಿನ್ ಅಕ್ವಟಿಕ್ಸ್ ಎರಡು ದಾಖಲೆ ಬರೆಯಿತು. ‌ಬಾಲಕರ ಮೆಡ್ಲೆಯಲ್ಲಿ ಬಿಎಸಿ ದಾಖಲೆ ನಿರ್ಮಿಸಿತು.

ಎರಡನೇ ದಿನ ಎರಡು ದಾಖಲೆಗಳನ್ನು ನಿರ್ಮಿಸಿದ್ದ ಬಸವನಗುಡಿ ಈಜುಕೇಂದ್ರದ ತನಿಶ್ ಜಾರ್ಜ್ ಮ್ಯಾಥ್ಯೂ ಕೊನೆಯ ದಿನ ಬಾಲರಕ ಗುಂಪು 1ರ 100 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ದಾಖಲೆ ಮಾಡಿದರು. ಭಾರತ ಈಜು ಫೆಡರೇಷನ್‌ನ ಅತಿಥಿ ಈಜುಪಟು ಕೆನಿಶಾ ಗುಪ್ತಾ ಮಹಿಳೆಯರ ಗುಂಪು1ರ 100 ಮೀ ಫ್ರೀಸ್ಟೈಲ್‌ನಲ್ಲಿ ದಾಖಲೆ ಮಾಡಿದರು.

ಕೊನೆಯ ದಿನದ ಫಲಿತಾಂಶಗಳು: ಮಹಿಳೆಯರ 200 ಮೀ ಬಟರ್‌ಫ್ಲೈ: ವಿಭಾ ಅಪರ್ಣಾ (ಪೂಜಾ ಅಕ್ವಾಟಿಕ್ಸ್‌)–1. ಕಾಲ:2:56.03; ನಿಖಿತಾ (ಬಿಎಸಿ)–2; ಬಾಲಕರ ಗುಂಪು1ರ 200 ಮೀ ಬಟರ್‌ಫ್ಲೈ: ತನಿಶ್ ಜಾರ್ಜ್ ಮ್ಯಾಥ್ಯೂ (ಬಿಎಸಿ)–1. ಕಾಲ:2:06.61, ಉತ್ಕರ್ಷ್‌ ಪಾಟೀಲ್ (ಬಿಎಸಿ)–2, ಸಂಭವ್ (ಬಿಎಸ್‌ಆರ್‌ಸಿ)–3; ಮಹಿಳೆಯರ ಗುಂಪು 1ರ 200 ಮೀ ಬಟರ್‌ಫ್ಲೈ: ಅಣ್ವೇಷಾ ಗಿರೀಶ್ (ಡಾಲ್ಫಿನ್)–1. ಕಾಲ:2:30.85, ತಿತೀಕ್ಷಾ (ಬಿಎಸ್‌ಆರ್‌ಸಿ)–2, ಜೆಡಿಡಾ (ಡಿಕೆವಿ ಈಜು ಕೇಂದ್ರ)–3; ಬಾಲಕರ ಗುಂಪು 2ರ200 ಮೀ ಬಟರ್‌ಫ್ಲೈ: ಅಮೋಘ್‌ (ಬಿಎಸಿ)–1. ಕಾಲ:2:20.08, ಕಾರ್ತಿಕೇಯನ್ ನಾಯರ್ (ಡಾಲ್ಫಿನ್‌)–2, ನೀಲೇಶ್ ದಾಸ್ (ಡಾಲ್ಫಿನ್‌)–3; ಬಾಲಲಿಯರ ಗುಂಪು 2ರ200 ಮೀ ಬಟರ್‌ಫ್ಲೈ: ಹಾಶಿಕಾ (ಡಾಲ್ಫಿನ್‌)–1. ಕಾಲ:2:41.44, ಅನ್ಶು ದೇಶಪಾಂಡೆ (ವಿಜಯನಗರ ಈಜು ಕೇಂದ್ರ)–2, ಶಿರೀನ್‌ (ಪೂಜಾ)–3; ಪುರುಷರ ಗುಂಪು 1ರ 100 ಮೀ ಫ್ರೀಸ್ಟೈಲ್‌: ಶ್ರೀಹರಿ ನಟರಾಜ್ (ಡಾಲ್ಫಿನ್)–1. ಕಾಲ:51.76, ಹರ್ಷವರ್ಧನ್ (ಬಿಎಸಿ)–2, ಆದಿತ್ಯ ಭಂಡಾರಿ (ಜೈಹಿಂದ್ ಈಜು ಕ್ಲಬ್‌)–3; ಮಹಿಳೆಯರ 100 ಮೀ ಫ್ರೀಸ್ಟೈಲ್‌: ಮಾಳವಿಕಾ (ಜಿಎಎಫ್‌ಆರ್‌ಎವೈ)–1. ಕಾಲ:1:00.54, ಸ್ನೇಹಾ (ಬಿಎಸಿ)–2, ರಿಯಾ ವಿಜಯ್ (ನೆಟ್ಟಕಲ್ಲಪ್ಪ ಈಜುಕೇಂದ್ರ)–3; ಬಾಲಕರ ಗುಂಪು 1ರ 100 ಮೀ ಫ್ರೀಸ್ಟೈಲ್‌: ತನಿಶ್ ಜಾರ್ಜ್ ಮ್ಯಾಥ್ಯೂ (ಬಿಎಸಿ)–1. ಕಾಲ: 52.50 (ಕೂಟ ದಾಖಲೆ), ಸಂಭವ್‌ (ಬಿಎಸ್‌ಆರ್‌ಸಿ)–2, ಹಿತೇನ್ ಮಿತ್ತಲ್ (ಜಿಎಎಫ್‌ಆರ್‌ಎವೈ)–3; ಪುರುಷರ 50 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಡಾಲ್ಫಿನ್)–1. ಕಾಲ:26.04, ಲಿಖಿತ್ (ವಿಜಯನಗರ)–2, ಆದಿತ್ಯ ಭಂಡಾರಿ (ಜೈ ಹಿಂದ್‌)–3; ಮಹಿಳೆಯರ50 ಮೀ ಬ್ಯಾಕ್‌ಸ್ಟ್ರೋಕ್: ಜಾಹ್ನವಿ ಗಿರೀಶ್‌ (ಕೆ.ವಿ.ಈಜುಕೇಂದ್ರ)–1. ಕಾಲ:38.11, ಮಹತಿ ಪಟವರ್ಧನ್‌ (ನೆಟ್ಟಕಲ್ಲಪ್ಪ ಈಜುಕೇಂದ್ರ)–2, ರಿಯಾ ವಿಜಯ್‌ (ನೆಟ್ಟಕಲ್ಲಪ್ಪ ಈಜುಕೇಂದ್ರ)–3; ಬಾಲಕರ ಗುಂಪು 1ರ 50 ಮೀ ಬ್ಯಾಕ್‌ಸ್ಟ್ರೋಕ್: ಘೃತನ್‌ ವಿ (ವಿಜಯನಗರ)–1. ಕಾಲ:29.69, ನಯನ್ ವಿಘ್ನೇಶ್‌ (ನೆಟ್ಟಕಲ್ಲಪ್ಪ ಈಜುಕೇಂದ್ರ)–2, ಸ್ವಯಂ (ಪೂಜಾ)–3, ಆರ್ಯನ್ ರಾಜೇಶ್ (ಜಿಎಎಫ್‌ಆರ್‌ಎವೈ)–3; ಮಹಿಳೆಯರ ಗುಂಪು 1ರ 50 ಮೀ ಬ್ಯಾಕ್‌ಸ್ಟ್ರೋಕ್: ಸುವನಾ ಸಿ.ಭಾಸ್ಕರ್ (ಡಾಲ್ಫಿನ್)–1. ಕಾಲ:30.67, ನೀನಾ ವೆಂಕಟೇಶ್ (ಡಾಲ್ಫಿನ್‌)–2, ರಿತು ಭರಮರಡ್ಡಿ (ಬಿಎಸಿ)–3; ಬಾಲಕಿಯರ ಗುಂಪು 2ರ 50 ಮೀ ಬ್ಯಾಕ್‌ಸ್ಟ್ರೋಕ್: ರಿಧಿಮಾ ಕುಮಾರ್ (ಬಿಎಸಿ)–1. ಕಾಲ: 30.98, ಮಾನವಿ ವರ್ಮಾ (ಡಾಲ್ಫಿನ್)–2, ಶಾಲಿನಿ (ಡಾಲ್ಫಿನ್)–3; ಪುರುಷರ 4x100 ಮೀ ಮೆಡ್ಲೆ: ಬಿಎಸಿ–1. ಕಾಲ:29.59, ಬಿಎಸಿ ಬಿ–2, ಬಿಎಸ್‌ಆರ್‌ಸಿ–3; ಮಹಿಳೆಯರ 4x100 ಮೀ ಮೆಡ್ಲೆ: ಬಿಎಸಿ–1. ಕಾಲ:5:40.46, ನೆಟ್ಟಕಲ್ಲಪ್ಪ ಈಜುಕೇಂದ್ರ–2; ಬಾಲಕರ ಗುಂಪು 1ರ4x100 ಮೀ ಮೆಡ್ಲೆ: ಬಿಎಸಿ–1. ಕಾಲ:4:03.81 (ಕೂಟ ದಾಖಲೆ), ಜಿಎಎಫ್‌ಆರ್‌ಎವೈ–2, ಪೂಜಾ ಈಜುಕೇಂದ್ರ–3; ಮಹಿಳೆಯರ ಗುಂಪು 1ರ 4x100 ಮೀ ಮೆಡ್ಲೆ: ಡಾಲ್ಫಿನ್‌–1. ಕಾಲ:4:40.51 (ಕೂಟ ದಾಖಲೆ), ಜಿಎಎಫ್‌ಆರ್‌ಎವೈ–2, ಬಿಎಸ್‌ಆರ್‌ಸಿ–3; ಬಾಲಕರ ಗುಂಪು 2ರ 4x100 ಮೀ ಮೆಡ್ಲೆ: ಡಾಲ್ಫಿನ್–1. ಕಾಲ:4:27.32, ಬಿಎಸ್ಆರ್‌ಸಿ–2, ಪೂಜಾ ಈಜುಕೇಂದ್ರ–3; ಬಾಲಕಿಯರ ಗುಂಪು 2ರ4x100 ಮೀ ಮೆಡ್ಲೆ: ಡಾಲ್ಫಿನ್‌–1. ಕಾಲ:4:48.57 (ಕೂಟ ದಾಖಲೆ), ಪೂಜಾ ಈಜುಕೇಂದ್ರ–2, ಬಿಎಸಿ–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT