ಸೋಮವಾರ, ಜೂನ್ 21, 2021
29 °C

ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಗೆದ್ದ ಸಬಲೆಂಕಾ

ಎಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್: ಬೆಲಾರಸ್‌ನ ಅಯಾನ ಸಬಲೆಂಕಾ ಅವರು ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ನಡೆದ ಫೈನಲ್‌ನಲ್ಲಿ ಅವರು ಅಗ್ರ ಕ್ರಮಾಂಕದ ಆಟಗಾರ್ತಿ, ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಅವರನ್ನು 6-0, 3-6, 6-4ರಲ್ಲಿ ಮಣಿಸಿದರು. ಈ ಮೂಲಕ 10ನೇ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದುಕೊಂಡರು. ಆವೆಮಣ್ಣಿನ ಅಂಗಣದಲ್ಲಿ ಇದು ಅವರು ಗೆದ್ದ ಮೊದಲ ಪ್ರಶಸ್ತಿಯಾಗಿದೆ.

ಪುರುಷರ ವಿಭಾಗದ ಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಮಟಿಯೊ ಬರೆಟಿನಿ ಸೆಣಸುವರು. ಸೆಮಿಫೈನಲ್‌ನಲ್ಲಿ ಜ್ವೆರೆವ್ 6-3, 6-4ರಲ್ಲಿ ಡಾಮಿನಿಕ್ ಥೀಮ್ ಎದುರು ಗೆದ್ದರು. ಬರೆಟಿನಿ 6-4, 6-4ರಲ್ಲಿ ಕಾಸ್ಪರ್ ರೂಡ್‌ ಅವರನ್ನು ಮಣಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು