ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾ, ಸಹ್ಯಾದ್ರಿ ತಂಡಗಳಿಗೆ ಪ್ರಶಸ್ತಿ

ಬೆಂಗಳೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್‌ ಲೀಗ್‌
Last Updated 13 ಡಿಸೆಂಬರ್ 2020, 16:12 IST
ಅಕ್ಷರ ಗಾತ್ರ

ಬೆಂಗಳೂರು: ಸಹ್ಯಾದ್ರಿ ಹಾಗೂ ಜಯಾ ಸ್ಪೋರ್ಟ್ಸ್ (ಎ) ಕ್ಲಬ್‌ ತಂಡಗಳು ಬೆಂಗಳೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.

ಇಲ್ಲಿಯ ಉದಯಭಾನು ಕಲಾ ಸಂಘ ಮೈದಾನದಲ್ಲಿ ನಡೆದ ಟೂರ್ನಿಯ ಪುರುಷರ ವಿಭಾಗದ ಫೈನಲ್‌ ಪಂದ್ಯದಲ್ಲಿ ಸಹ್ಯಾದ್ರಿ ಸ್ಪೋರ್ಟ್ಸ್ ಕ್ಲಬ್‌ ತಂಡವು 31–35, 37–35, 20–35ರಿಂದ ವಿಜಯನಗರ ಬಿಬಿಸಿ ತಂಡವನ್ನು ಮಣಿಸಿತು. ಮಹಿಳಾ ವಿಭಾಗದ ಫೈನಲ್‌ ಪಂದ್ಯದಲ್ಲಿ ಜಯಾ ಸ್ಪೋರ್ಟ್ಸ್ ಕ್ಲಬ್‌ (ಎ) ತಂಡವು 35–18, 35–27ರಿಂದ ಕಾಮಧೇನು ಸ್ಪೋರ್ಟ್ಸ್ ಕ್ಲಬ್‌ಅನ್ನು ಸೋಲಿಸಿತು.

ಮಹಿಳಾ ವಿಭಾಗದಲ್ಲಿ ಜಯಾ ಸ್ಪೋರ್ಟ್ಸ್ ಕ್ಲಬ್‌ನ ಪಲ್ಲವಿ.ಬಿ. ಹಾಗೂ ಗಗನಾ ಅವರು ಶ್ರೇಷ್ಠ ಆಟಗಾರ್ತಿಯರು ಎನಿಸಿಕೊಂಡರು. ಪುರುಷರ ವಿಭಾಗದಲ್ಲಿ ವಿಜಯನಗರ ಬಿಬಿಸಿಯ ಸುಜಿತ್‌, ಎಂಇಐ ಸ್ಪೋರ್ಟ್ಸ್ ಕ್ಲಬ್‌ನ ಶಿವಮೂರ್ತಿ ಹಾಗೂ ಸಹ್ಯಾದ್ರಿ ಕ್ಲಬ್‌ನ ಸುಂದರ್‌ ಶ್ರೇಷ್ಠ ಆಟಗಾರರು ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT