ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಅಥ್ಲೆಟಿಕ್ಸ್ ತಂಡಕ್ಕೆ ನಿಕೊಲಾಯ್ ತರಬೇತಿ

Last Updated 15 ಜನವರಿ 2021, 10:24 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಮಧ್ಯಮ ಮತ್ತು ದೀರ್ಘದೂರ ವಿಭಾಗದ ಅಥ್ಲೀಟ್‌ಗಳಿಗೆ ಬೆಲಾರಸ್‌ನ ನಿಕೊಲಾಯ್ ಸ್ನೆಸರೆವ್‌ ತರಬೇತಿ ನೀಡಲಿದ್ದಾರೆ. ಅವರನ್ನು ಕೋಚ್ ಆಗಿ ನೇಮಿಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಶುಕ್ರವಾರ ಅನುಮೋದನೆ ನೀಡಿದೆ.

72 ವರ್ಷದ ನಿಕೊಲಾಯ್ ಅವರ ಅವಧಿ ಈ ವರ್ಷದ ಸೆಪ್ಟೆಂಬರ್ ಅಂತ್ಯದವರೆಗೆ ಇರಲಿದೆ. ಈ ಅವಧಿಯಲ್ಲೇ ಟೋಕಿಯೊ ಒಲಿಂಪಿಕ್ಸ್ (ಜುಲೈ–ಆಗಸ್ಟ್‌) ನಡೆಯಲಿದೆ.

ಒಲಿಂಪಿಕ್‌ ಕೂಟಕ್ಕೆ ಈಗಾಗಲೇ ಅರ್ಹತೆ ಗಿಟ್ಟಿಸಿರುವ 3000 ಮೀಟರ್ ಸ್ಟೀಪಲ್‌ಚೇಸ್‌ ಓಟಗಾರ ಅವಿನಾಶ್ ಸಬ್ಳೆ ಮತ್ತು ಅರ್ಹತೆಗೆ ಪ್ರಯತ್ನಿಸುತ್ತಿರುವ ಇತರ ಅಥ್ಲೀಟ್‌ಗಳಿಗೆ ನಿಕೊಲಾಯ್‌ ಮಾರ್ಗದರ್ಶನ ಮಾಡಲಿದ್ದಾರೆ.

ನಿಕೊಲಾಯ್‌ ಈ ಮೊದಲು ಭಾರತ ತಂಡದಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಅವಿನಾಶ್ ಸಬ್ಳೆ 2019ರ ಫೆಬ್ರುವರಿಯಲ್ಲಿನಿಕೊಲಾಯ್ ಅವರನ್ನು ತೊರೆದು ಆರ್ಮಿ ಕೋಚ್ ಅಮರೀಶ್ ಕುಮಾರ್ ಅವರಬಳಿ ತರಬೇತಿಗೆ ತೆರಳಿದರು. ಇದರಿಂದಾಗಿ ಬೆಲಾರಸ್‌ನ ನಿಕೊಲಾಯ್ ತಂಡವನ್ನು ತೊರೆದಿದ್ದರು.

ನಿಕೊಲಾಯ್ಮೊದಲ ಬಾರಿ ಭಾರತ ಅಥ್ಲೆಟಿಕ್ಸ್ ತಂಡಕ್ಕೆ ಕೋಚ್ ಆಗಿ ಸೇರಿಕೊಂಡಿದ್ದು 2005ರಲ್ಲಿ. ಅವರ ಅವಧಿಯಲ್ಲಿ ಪ್ರೀಜಾ ಶ್ರೀಧರನ್‌, ಕವಿತಾ ರಾವತ್ ಸೇರಿಂತೆ ಹಲವು ಅಥ್ಲೀಟ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT