ಸಾಯ್‌ಯಲ್ಲಿ ಸಫಾಯಿ ಕರ್ಮಚಾರಿಗಳ ಶೋಷಣೆ

7

ಸಾಯ್‌ಯಲ್ಲಿ ಸಫಾಯಿ ಕರ್ಮಚಾರಿಗಳ ಶೋಷಣೆ

Published:
Updated:

ಬೆಂಗಳೂರು: ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಕಾರ್ಮಿ ಕರನ್ನು ಸಾಯ್ ಅಧಿಕಾರಿಗಳು ಮತ್ತು ಸ್ವಚ್ಛತಾ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ಆರ್‌ಟಿಐಯಲ್ಲಿ ಮಾಹಿತಿ ಕೋರಿರುವ ಅಥ್ಲೀಟ್‌, ನಾಯಂಡಹಳ್ಳಿ ನಿವಾಸಿ ವೀರಯ್ಯ ಹಿರೇಮಠ ಆರೋಪಿಸಿದ್ದಾರೆ.

‘ಕಾರ್ಮಿಕ ಆಯೋಗದ ಕನಿಷ್ಠ ವೇತನ ಕಾಯ್ದೆ ಪ್ರಕಾರ ಸಫಾಯಿ ಕರ್ಮಚಾರಿಗಳಿಗೆ ದಿನವೊಂದಕ್ಕೆ ತಲಾ ₹ 553 ಸಿಗಬೇಕು. ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಸಾಯ್‌ ನಿಗದಿತ ಪ್ರಮಾಣದಲ್ಲೇ ವೇತನ ನೀಡಲಾಗುತ್ತಿದೆ ಎಂದು ಹೇಳಿದೆ. ಆದರೆ ಇದಕ್ಕೆ ಸಲ್ಲಿಸಿ ರುವ ದಾಖಲೆಗಳು ಸರಿ ಇಲ್ಲ. ಬಿಳಿ ಹಾಳೆಯಲ್ಲಿ ಕಾರ್ಮಿಕರ ಹೆಸರನ್ನು ಬರೆದು ಅದರ ಮುಂದೆ ₹ 553 ನೀಡಿರುವುದಾಗಿ ತೋರಿಸಲಾಗಿದೆ’ ಎಂಬುದು ಅವರ ಆರೋಪ.

‘ಕಾರ್ಮಿಕರನ್ನು ಕೇಳಿದರೆ ಕಳೆದ ವರ್ಷ ತಲಾ ₹ 330 ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ತಿಂಗಳ 30 ದಿನವೂ ದುಡಿದರೆ ಒಬ್ಬೊಬ್ಬರಿಗೆ ಸಿಗುವುದು ಕೇವಲ ₹ 9,900. ಇದ ರಿಂದ ಪಿಎಫ್‌ ಮತ್ತು ಇಎಸ್‌ಐಗಾಗಿ ಗುತ್ತಿಗೆದಾರರು ₹ 750 ಕಡಿತೊಳಿಸು ತ್ತಾರೆ. ಇದಕ್ಕೆ ಗುತ್ತಿಗೆದಾರರ ಕಂಪನಿ ಅಷ್ಟೇ ಹಣ ಸೇರಿಸುತ್ತದೆ ಎಂದು ಹೇಳಲಾಗಿದೆ. ಕೆಲಸ ಬಿಟ್ಟು ಹೋದ ವರಿಗೆ ಪಿಎಫ್‌ ಹಣ ವಾಪಸ್ ನೀಡುವಾಗ ₹ 750ರ ಲೆಕ್ಕದಲ್ಲಷ್ಟೇ ಲಭಿಸಿದೆ’ ಎಂದು ವೀರಯ್ಯ ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !