ಶನಿವಾರ, ಸೆಪ್ಟೆಂಬರ್ 25, 2021
28 °C

Tokyo Olympics: ಸೇಲಿಂಗ್‌ ಪಟುಗಳಿಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಭಾರತದ ಸೇಲಿಂಗ್ ಪಟುಗಳಾದ ವಿಷ್ಣು ಸರವಣನ್‌ ಮತ್ತು ನೇತ್ರಾ ಕುಮನನ್ ಅವರು ಸ್ಪರ್ಧೆಯ ಎರಡನೇ ದಿನವೂ ನಿರಾಸೆ ಮೂಡಿಸಿದರು.

ಮಹಿಳೆಯರ ಲೇಸರ್‌ ರೇಡಿಯಲ್‌ ವಿಭಾಗದಲ್ಲಿ ಮೂರನೇ ರೇಸ್‌ನಲ್ಲಿ ನೇತ್ರಾ 15ನೇ ಸ್ಥಾನ ಗಳಿಸಿದರೆ, ನಾಲ್ಕನೇ ರೇಸ್‌ಅನ್ನು 40ನೇ ಸ್ಥಾನ ದೊಂದಿಗೆ ಕೊನೆಗೊಳಿಸಿದರು.

ಪುರುಷರ ಲೇಸರ್‌ ವಿಭಾಗದಲ್ಲಿ ಕಣಕ್ಕಿಳಿದಿರುವ ವಿಷ್ಣು ಎರಡನೇ ರೇಸ್‌ನಲ್ಲಿ 20ನೇ ಸ್ಥಾನ ಗಳಿಸಿದರೆ, ಮೂರನೇ ರೇಸ್‌ನಲ್ಲಿ 24ನೇ ಸ್ಥಾನ ಗಳಿಸಿದರು.

ಮಂಗಳವಾರ ಐದು ಹಾಗೂ ಆರನೇ ರೇಸ್‌ನಲ್ಲಿ ನೇತ್ರಾ ಅವರು ಅದೃಷ್ಟ ಪರೀಕ್ಷಿಸಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು