ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಕ್ವಾರ್ಟರ್ ಫೈನಲ್: ಸೈನಾಗೆ ಸೋಲು

7

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಕ್ವಾರ್ಟರ್ ಫೈನಲ್: ಸೈನಾಗೆ ಸೋಲು

Published:
Updated:

ನಾನ್‌ಜಿಂಗ್‌, ಚೀನಾ: ಭಾರತದ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಾಭವಗೊಂಡಿದ್ದಾರೆ. ಎರಡು ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್‌ನ ಕರೊಲಿನಾ ಮರಿನ್, ಸೈನಾ ಅವರನ್ನು 21-6, 21 -11 ಅಂತರದಿಂದ ಸೋಲಿಸಿದ್ದಾರೆ.

ಮರಿನ್ ಅವರ ವೇಗ ಆಟದ ಮುಂದೆ ಸುಸ್ತಾದ ಸೈನಾಗೆ 42 ಪಾಯಿಂಟ್‍ಗಳಲ್ಲಿ  17 ಪಾಯಿಂಟ್ ಗಳಿಸಲಷ್ಟೇ ಸಾಧ್ಯವಾಯಿತು. ಹಾಫ್ ಸ್ಮಾಶ್, ಕ್ರಾಸ್ ಕೋರ್ಟ್ ಶಾಟ್‍ಗಳಿಂದ ಆಡಿದ ಮೆರಿನ್ ಆಟ ಸೈನಾಳನ್ನು ಕಂಗೆಡಿಸಿತು. ಈ ಹಿಂದೆ 2015ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದಲ್ಲಿ ಸೈನಾಳಿಗೆ ಮೆರಿನ್ ಮುಂದೆ ಜಯ ಸಾಧಿಸಲು ಸಾಧ್ಯವಾಗಿರಲಿಲ್ಲ. 

 ಮೊದಲ ಸುತ್ತಿನಲ್ಲಿ 21-6 ಮುನ್ನಡೆ ಸಾಧಿಸಿದ ಮರಿನ್ ಮುಂದೆ ಎರಡನೇ ಸುತ್ತಿನಲ್ಲಿ ಪೈಪೋಟಿ ನೀಡಲು ಸೈನಾಳಿಗೆ ಸಾಧ್ಯವಾಗಲಿಲ್ಲ. ಹಾಗಾಗಿ 31ನೇ ನಿಮಿಷಕ್ಕೆ ಪಂದ್ಯ ಮುಗಿದಿದೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !