ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ ನೆಹ್ವಾಲ್‌ಗೆ ಕೋವಿಡ್–19 ದೃಢ

Last Updated 9 ಡಿಸೆಂಬರ್ 2020, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ಕೋವಿಡ್ –19 ಸೋಂಕು ಇರುವುದು ಖಚಿತವಾಗಿದೆ.

’ಹೋದ ವಾರ ಸೈನಾ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿತ್ತು. ಆದರೆ ಅವರಿಗೆ ಸುಸ್ತು ಇದ್ದ ಕಾರಣ ಅಭ್ಯಾಸದಿಂದ ವಿಶ್ರಾಂತಿ ನೀಡಲಾಗಿತ್ತು. ಸೋಮವಾರ ಮತ್ತೊಮ್ಮೆ ಕೊರೊನಾ ಪರೀಕ್ಷೆ ಮಾಢಿದಾಗ ಪಾಸಿಟಿವ್ ಬಂದಿತ್ತು. ಅವರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದೆ‘ ಎಂದು ಪುಲ್ಲೇಲ ಗೋಪಿಚಂದ್ ಅಕಾಡೆಮಿಯ ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ಸೈನಾ ಅವರ ಪತಿ, ಬ್ಯಾಡ್ಮಿಂಟನ್ ಪಟು ಕಶ್ಯಪ್ ಸೇರಿದಂತೆ ಅಕಾಡೆಮಿಯ ಕೆಲವು ಆಟಗಾರರಿಗೆ ಲಕ್ಷಣರಹಿತ ಸೋಂಕು ಇರುವುದು ಪತ್ತೆಯಾಗಿತ್ತು.

’ನವೆಂಬರ್ 25ರಂದು ಆಟಗಾರ ಗುರುಸಾಯಿದತ್ತ ಅವರ ಮದುವೆ ಸಮಾರಂಭದಲ್ಲಿ ಸೈನಾ, ಕಶ್ಯಪ್, ಎಚ್.ಎಸ್. ಪ್ರಣಯ್ ಮತ್ತು ಪ್ರಣವ್ ಜೆರಿ ಚೋಪ್ರಾ ಭಾಗವಹಿಸಿದ್ದರು. ಆ ಸಮಾರಂಭದಲ್ಲಿ ಸೈನಾ ಅವರನ್ನು ಭೇಟಿಯಾಗಿ್ದ್ದ ಸ್ನೇಹಿತರೊಬ್ಬರಿಗೆ ಕೆಲವು ದಿನಗಳ ನಂತರ ಸೋಂಕು ಇರುವುದು ಪತ್ತೆಯಾಗಿತ್ತು‘ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT